ಗೂಗಲ್ ನಿಂದ ಹೊಸ ಪ್ರಯೋಗ: ಮೊಬೈಲ್- ಕಂಪ್ಯೂಟರ್ ಕನೆಕ್ಟ್ ಮಾಡೋದು ಇನ್ನೂ ಸುಲಭ

ಭಾನುವಾರ, 9 ಜನವರಿ 2022 (19:28 IST)
ಈಗ ಹೆಚ್ಚು ಟೆಕ್ ಕೆಲಸಗಳು ನಡೆಯುತ್ತಿರೋದು ಕನೆಕ್ಟಿವಿಟಿ ಮೂಲಕ. ಇದನ್ನು ಮತ್ತಷ್ಟು ಸುಲಭಗೊಳಿಸಲು ಈಗ ಗೂಗಲ್ ಕೈಹಾಕಿದೆ. ನಿಮ್ಮ ಮೊಬೈಲ್ ನಿಂದ ಕಂಪ್ಯೂಟರ್ ಗೆ ಫೈಲ್ಸ್ ಶೇರ್ ಮಾಡುವ ಕೆಲಸವನ್ನು ಇದು ಮತ್ತಷ್ಟು ಸುಲಭಗೊಳಿಸುವ ಪ್ರಯತ್ನ.
ಕೆಲವು ವರ್ಷಗಳ ಹಿಂದೆ ಈ ಕೆಲಸವನ್ನು ಮೈಕ್ರೋಸಾಫ್ಟ್ ಮಾಡಿತ್ತು. ಈಗ ಆ ಪ್ರಯೋಗ ಮಾಡಲು ಗೂಗಲ್ ಮುಂದಾಗಿದೆ.
ಶೀಘ್ರದಲ್ಲಿ ಗೂಗಲ್ ಹೊಸ ಫಾಸ್ಟ್ ಪೇರ್ ಸಾಫ್ಟ್ ವೇರ್ ಅನ್ನು ಪರಿಚಯಿಸಲಿದ್ದು, ಇದು ನಿಮ್ಮ ಮೊಬೈಲ್ ಅನ್ನು ಯಾವುದೇ ಟೆಕ್ ಡಿವೈಸ್ ಗಳಿಗೆ ಸಂಪರ್ಕಿಸಬಹುದಾಗಿದೆ.
ಈ ಫಾಸ್ಟ್ ಪೇರ್ ಮೂಲಕ ನಿಮ್ಮ ಕಂಪ್ಯೂಟರ್ ಹಾಗೂ ಆಂಡ್ರಾಯ್ಡ್ ಫೋನ್ ಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಜತೆಗೆ ನಿಯರ್ ಬೈ ಆಪ್ಷನ್ ಮೂಲಕ ಬ್ಲೂಟೂತ್ ಸಂಪರ್ಕ, ಟಿವಿ, ಸ್ಪೀಕರ್, ಕಾರು, ಮೆಸೇಜ್ ಸಿಂಕ್ ಹಾಗೂ ಫೈಲ್ಸ್ ಶೇರ್ ಕೂಡ ಮಾಡಬಹುದಾಗಿದೆ.
ಇನ್ನು ಮುಂದೆ ಜನರು ತಮ್ಮ ಕನೆಕ್ಟ್ ಆಗಿರುವ ಯಾವುದೇ ಡಿವೈಸ್ ಗಳನ್ನು ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಕಂಟ್ರೋಲ್ ಮಾಡಬಹುದು.
ಇದನ್ನು ಕಾರ್ಯರೂಪಕ್ಕೆ ತರಲು ಗೂಗಲ್ ಏಸರ್, ಹೆಚ್ಚಪಿ, ಇಂಟೆಲ್ ನಂತರ ಸಂಸ್ಥೆಗಳೊಂದಿಗೆ ಕೆಲಸ ನಡೆಸುತ್ತಿದೆ. 2022ರ ವೇಳಗೆ ಫಾಸ್ಟ್ ಪೇರ್ ಲಭ್ಯವಾಗುವ ನಿರೀಕ್ಷೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ