ಕಸದ ತೊಟ್ಟಿಯಲ್ಲಿ ಪತ್ತೆಯಾದ ನವಜಾತ ಶಿಶು
ಜೀವಂತ ಶಿಶುವೊಂದು ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ.
ಜೀವಂತ ಮಗುವನ್ನು ತೊಟ್ಟಿಯಲ್ಲಿ ಪೋಷಕರು ಬಿಟ್ಟುಹೋಗಿದ್ದಾರೆ. ಕಸದಲ್ಲಿ ಮಿಸುಕಾಡುತ್ತಿದ್ದ ಮಗುವಿನ ಶಬ್ದ ಕೇಳಿ ಸ್ಥಳೀಯರಿಂದ ಮಗುವಿನ ರಕ್ಷಣೆ ಮಾಡಲಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಪಕ್ಕದ ಕಸದಲ್ಲಿ ಜೀವಂತ ಶಿಶು ದೊರೆತಿದೆ. ಸ್ಥಳೀಯರು ಮಾನವೀಯತೆ ಮೆರೆದು ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೊಲೀಸರ ಗಮನಕ್ಕೆ ವಿಷಯ ಮುಟ್ಟಿಸಿದ್ದಾರೆ. ಆ ಬಳಿಕ ಜೀವಂತ ಮಗುವನ್ನು ಪೊಲೀಸರ ಮೂಲಕ ಸರಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.