ಒಂದು ದಿನದ ಗಂಡು ನವಜಾತ ಶಿಶು ಪತ್ತೆ: ಸ್ಥಳೀಯರಿಂದ ರಕ್ಷಣೆ
ಭೀಮಾನದಿಯ ಬ್ರಿಡ್ಜ್ ಬಳಿ ಒಂದು ದಿನದ ಗಂಡು ನವಜಾತ ಶಿಶು ಪತ್ತೆಯಾಗಿದೆ.
ಯಾದಗಿರಿ ಜಿಲ್ಲೆಯ ಭೀಮಾನದಿಯ ಬ್ರಿಡ್ಜ್ ಬಳಿ ಒಂದು ದಿನದ ಗಂಡು ನವಜಾತ ಶಿಶು ಪತ್ತೆಯಾಗಿದೆ. ಭೀಮಾನದಿಯ ಬ್ರಿಡ್ಜ್ ಕೆಳಗಡೆ ಒಂದು ದಿನದ ಗಂಡು ಮಗುವನ್ನು ಪೋಷಕರು ಬಟ್ಟೆಯಲ್ಲಿ ಸುತ್ತಿ ಬಿಸಾಡಿ ಹೋಗಿದ್ದರು. ಈ ವೇಳೆ ಮಗು ಅಳುತ್ತಿರುವ ಶಬ್ದ ಕೇಳಿದೆ. ಅಲ್ಲೇ ಇದ್ದ ಸಾರ್ವಜನಿಕರು ಸ್ವಲ್ಪ ದೂರ ಹೋಗಿ ನೋಡಿದ್ದಾರೆ.
ಈ ವೇಳೆ ಒಂದು ದಿನದ ಗಂಡು ಮಗು ಪತ್ತೆಯಾಗಿದೆ. ಬಳಿಕ ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಮಕ್ಕಳ ರಕ್ಷಣಾಧಿಕಾರಿ ರೆಹಮಾನ್ ಹಾಗೂ ಸಿಬ್ಬಂದಿ ಶಿಶುವನ್ನು ರಕ್ಷಣೆ ಮಾಡಿ, ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಸ್‌ಎನ್‌ಸಿಯು ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾದಗಿರಿ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.