ನವ ದಂಪತಿಗಳಿಗೆ ಖಳನಾಯಕಿಯಾಗಿರೋ ಹುಡುಗಿಯ ತಾಯಿ?

ಬುಧವಾರ, 24 ಅಕ್ಟೋಬರ್ 2018 (22:42 IST)
ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ದಂಪತಿಯನ್ನ ಯುವತಿಯ ತಾಯಿಯೇ ಬೇರ್ಪಡಿಸಿರೋ ಆರೋಪ ಕೇಳಿಬಂದಿದೆ. ನವ ದಂಪತಿಗಳಿಗೆ ಖಳನಾಯಕಿಯಾಗಿರೋ ಹುಡುಗಿಯ ತಾಯಿಯ ಕೃತ್ಯದಿಂದ ಹುಡುಗ ನಲುಗುವಂತಾಗಿದೆ.

ಮೇ 13 ರಂದು ಶ್ರೀಧರ್ (28) ಪ್ರೀಯಾ (18) ವಿವಾಹವಾಗಿದ್ದರು. ಬೆಂಗಳೂರಿನ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಿದ್ದ ಯುವ ಜೋಡಿಯು, ವಿವಾಹ ನಂತರ ಹುಡುಗನ ಮನೆಯಿಂದ ಯುವತಿಯನ್ನ ಯುವತಿ ತಾಯಿ ವಿಜಯಲಕ್ಷ್ಮಿ ಬಾಯಿ ಕರೆದೊಯ್ದಿದ್ದರು.

ಯುವತಿ ಪ್ರಿಯಾಳನ್ನು ಮತ್ತೆ ವಿಜಯಲಕ್ಷ್ಮಿ ಬಾಯಿ ಸಹೋದರನೊಂದಿಗೆ ಮರು ಮದುವೆ ಮಾಡಿಸಿದ್ದಳು.  ಮುರುಘಾ ಮಠದಲ್ಲಿ ವಿವಾಹ ಮಾಡಿಸಿದ್ದ ಯುವತಿ ತಾಯಿಯು, ಸಹೋದರ ಮಾವ ರಾಘವೇಂದ್ರ ಜೊತೆ ಮರು ಮದುವೆ ಮಾಡಿಸಿದ್ದಳು.
ಮನೆಯವರ ಕಿರುಕುಳಕ್ಕೆ ಬೇಸತ್ತು ಮತ್ತೆ ಮನೆ ಬಿಟ್ಟು ಬಂದಿದ್ದ ಯುವತಿ ಪ್ರೀಯಾ, ಮತ್ತೆ ವಿವಾಹದ ರಿಜಿಸ್ಟರ್  ಶ್ರೀಧರ್ ಮತ್ತು ಪ್ರೀಯ ಎಂದು ಮಾಡಿಸಿದ್ದರು.

ಹಿರಿಯೂರಿನಲ್ಲಿ ಸಂಸಾರ ಮಾಡುತ್ತಿದ್ದ ನವ ದಂಪತಿ ಅನ್ಯೋನ್ಯವಾಗಿದ್ದರು. ಅಕ್ಟೋಬರ್ 2 ರಂದು ಮತ್ತೆ ಆಸ್ಪತ್ರೆಗೆಂದು ಬಂದಾಗ ಬಲವಂತವಾಗಿ ತಾಯಿ ಜಯಲಕ್ಷ್ಮಿ  ಯುವತಿ ಪ್ರಿಯಾಳನ್ನು ಎಳೆದೊಯ್ದ ಆರೋಪ ಕೇಳಿಬಂದಿದೆ.
ಪತ್ನಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪತಿ ಶ್ರೀಧರ್ ನ್ಯಾಯ ಬೇಡುತ್ತಿದ್ದಾನೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ