ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದವನ ವಿರುದ್ಧ ದೂರು ನೀಡಲು ಬಂದ ಯುವತಿಗೆ ಪೊಲೀಸರು ಹೇಳಿದ್ದೇನು ಗೊತ್ತಾ?

ಗುರುವಾರ, 18 ಅಕ್ಟೋಬರ್ 2018 (06:35 IST)
ಬೆಂಗಳೂರು : ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ ಯುವಕನ ವಿರುದ್ಧ ದೂರು ನೀಡಲು ಬಂದ ಯುವತಿಯ ದೂರು ಸ್ವೀಕರಿಸುವ ಬದಲು ಮೊಬೈಲ್ ನಂಬರ್ ಬದಲಾಯಿಸುವಂತೆ ಬೆಂಗಳೂರು ಪೊಲೀಸರು ಸಲಹೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಯುವತಿಯೊಬ್ಬಳಿಗೆ ಯುವಕನೊಬ್ಬ ವಾಟ್ಸಪ್ ಮೂಲಕ ನಿನ್ನ ತಾಯಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದೇನೆ, ಈಗ ನಿನ್ನ ಸರದಿ. ನಿನ್ನನ್ನು ನಾನು ಟ್ರೈ ಮಾಡಬೇಕು ಎಂದು ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಗೆ  ದೂರು  ನೀಡಲು ಬಂದರೆ ಪೊಲೀಸರು ನಿರ್ಲಕ್ಷ್ಯ ಮಾಡಿ ಅಥವಾ ನಂಬರ್ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ.


ಈ ಬಗ್ಗೆ ಯುವತಿಯ ಸ್ನೇಹಿತೆಯೊಬ್ಬರು ಟ್ವೀಟ್ ಮಾಡಿ ಇದು ಬೆಂಗಳೂರು ಪೊಲೀಸರು ನೀಡುವ ನ್ಯಾಯದ ಪರಿಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಈ ಕೃತ್ಯಕ್ಕೆ  ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ