ದಾವೂದ್ ಆಪ್ತರ ಮೇಲೆ NIA ದಾಳಿ..!
ಮುಂಬೈನಲ್ಲಿರುವ ದಾವೂದ್‌ಗೆ ಸಂಬಂಧಿಸಿದ ಹಲವಾರು ಸಹಚರರ ನಿವೇಶನಗಳ ಮೇಲೆ NIA ದಾಳಿ ನಡೆಸಿದೆ. ಇಂದು ಮುಂಬೈನ 20 ಸ್ಥಳಗಳಲ್ಲಿ NIA ರೇಡ್ ನಡೆಸಲಾಯ್ತು. ಈ 20 ಸ್ಥಳಗಳು ದಾವೂದ್‌ನ ಶಾರ್ಪ್ ಶೂಟರ್‌ಗಳು, ಸ್ಮಗ್ಲರ್‌ಗಳು, ಡಿ-ಕಂಪನಿಯ ರಿಯಲ್ ಎಸ್ಟೇಟ್ ಮ್ಯಾನೇಜರ್‌ಗೆ ಸಂಬಂಧಿಸಿವೆ. ಇದಲ್ಲದೇ ಹಲವು ಹವಾಲಾ ಆಪರೇಟರ್‌ಗಳ ಮೇಲೂ ದಾಳಿ ನಡೆದಿದೆ. ಮುಂಬೈನ ನಾಗ್ಪಾಡಾ, ಗೋರೆಗಾಂವ್, ಬೋರಿವಲಿ, ಸಾಂತಾಕ್ರೂಜ್, ಮುಂಬ್ರಾ, ಭೇಂಡಿ ಬಜಾರ್‌ಗಳಲ್ಲಿ ದಾಳಿ ಈಗಾಗಲೇ ನಡೆದಿದೆ.. ಮಾಹಿತಿಯ ಪ್ರಕಾರ, ಗೃಹ ಸಚಿವಾಲಯದ ಆದೇಶದ ಮೇರೆಗೆ, ದಾವೂದ್ ಇಬ್ರಾಹಿಂ, ಡಿ ಕಂಪನಿ ವಿರುದ್ಧ NIA ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.