ಬೇಸಿಗೆ ಶುರುವಾಗ್ತಿದ್ದಂತೆ ಕಾಡಿನಲ್ಲಿರುವ ಪ್ರಾಣಿಗಳಿಗೆ ಆಹಾರ, ನೀರಿನ ಕೊರತೆ ಹೆಚ್ಚಾಗುತ್ತೆ..ಹೀಗಿರುವಾಗ ಆಹಾರ ಅರಸಿ ಕಾಡಿನ ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕ್ತಿದೆ..ಅದರಂತೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಮನೆ ಮುಂದೆ ಕರಡಿಯೊಂದು ಪ್ರತ್ಯಕ್ಷವಾಗಿದೆ..ಚಿಕ್ಕಜೋಗಿಹಳ್ಳಿಯ ಲಕ್ಷ್ಮಣ ನಾಯ್ಕ ಎಂಬುವರ ತೋಟದ ಮನೆಗೆ ಕರಡಿ ನುಗ್ಗಿದ್ದು, ಕೆಲಕಾಲ ಕುಟುಂಬಸ್ಥರು ಗಾಬರಿಗೊಂಡಿದ್ರು..ಆಗಾಗ ಪ್ರಾಣಿಗಳು ಮನೆಯ ಬಳಿ ಬರುತ್ತಿದ್ದು, ಭಯದಲ್ಲೇ ಕಾಲಕಳೆಯುವಂತಾಗಿದೆ..ಹೀಗಾಗಿ ಅರಣ್ಯಾಧಿಕಾಗಳು ಕ್ರಮಕ್ಕೆ ಮುಂದಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ರು..ಅಲ್ಲದೇ, ಗುಡೇಕೋಟೆ ಕರಡಿಧಾಮಕ್ಕೆ ಕರಡಿಯನ್ನ ಬಿಟ್ಟು ಬರುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ರು.