ಪ್ರವಾಸಿಗರನ್ನು ಆಕರ್ಷಿಸುತ್ತಿದೆ ನಯಾಗರ ಫಾಲ್ಸ್

ಸೋಮವಾರ, 25 ಜುಲೈ 2022 (14:49 IST)
ಮಡಿಕೇರಿ : ಮಳೆಗಾಲ ಬಂದ್ರೆ ಮತ್ತಷ್ಟು ಸೌಂದರ್ಯದಿಂದ ಕಂಗೊಳಿಸೋ ಕರ್ನಾಟಕದ ಕಾಶ್ಮೀರದಲ್ಲಿ ನಿಸರ್ಗದ ಸಿರಿ ನೋಡುಗರಿಗೆ ಮುದನೀಡುತ್ತೆ.
 
ಇಂತಹ ಸುಂದರ ತಾಣಗಳ ಸಾಲಿಗೆ ಸೇರೋದೆ ಚಿಕ್ಲಿಹೊಳೆ ಜಲಾಶಯ. ಇದನ್ನು ನೋಡಲು ಪುಟ್ಟದಾಗಿದ್ದರೂ ತನ್ನ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

ಸುತ್ತಲೂ ನಿಸರ್ಗದ ಮಡಿಲು. ಕಣ್ಣು ಹಾಯಿಸಿದಲ್ಲೆಲ್ಲಾ ಕಂಗೊಳಿಸೋ ಹಸಿರ ಸಿರಿ. ಇದರ ನಡುವೆ ಹಾಲ್ನೊರೆಯಂತೆ ದುಮ್ಮಿಕ್ಕೋ ನೀರು, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಜಲಾಶಯ ನೋಡುತ್ತಿರೋ ಜನ. ಹೌದು, ಇದು ಕೊಡಗಿನ ಪುಟ್ಟ ಜಲಾಶಯ ಚಿಕ್ಲಿಹೊಳೆಯ ಮನಮೋಹಕ ದೃಶ್ಯ ವೈಭವ. 

ಮಳೆಗಾಲದ ವಿಶೇಷ ಅತಿಥಿಯಾದ ಈ ಚಿಕ್ಲಿಹೊಳೆ ಜಲಾಶಯವನ್ನು ‘ಮಿನಿ ನಯಾಗರ ಫಾಲ್ಸ್’ ಅಂತಲೂ ಕರೀತ್ತಾರೆ. ಅರ್ಧ ವೃತ್ತಾಕಾರದಲ್ಲಿ ಐದಾರು ಅಡಿಗಳ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕುವ ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಬೇಸಿಗೆಯಲ್ಲಿ ಬರಡಾಗಿ ಕಾಣೋ ಈ ಜಲಾಶಯದಲ್ಲಿ ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಮಳೆಯಿಂದ ಜಲಪಾತವೊಂದು ಸೃಷ್ಟಿಯಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ