ತಂದೆಯಾಗುತ್ತಿರುವ ಬಗ್ಗೆ ಖುಷಿಯಿಂದಲೇ ಹೇಳಿಕೊಂಡ ನಿಖಿಲ್ ಕುಮಾರಸ್ವಾಮಿ

ಭಾನುವಾರ, 27 ಜೂನ್ 2021 (13:04 IST)
ಬೆಂಗಳೂರು: ಜೆಡಿಎಸ್ ಯುವ ನಾಯಕ, ನಟ ನಿಖಿಲ್ ಕುಮಾರಸ್ವಾಮಿ ತಂದೆಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಡಿತ್ತು. ಈಗ ಸ್ವತಃ ನಿಖಿಲ್ ಈ ಸುದ್ದಿಯನ್ನು ಖುಷಿಯಿಂದಲೇ ಹಂಚಿಕೊಂಡಿದ್ದಾರೆ.

 

ಮಾಧ್ಯಮಗಳ ಮುಂದೆ ನಾಚಿಕೊಳ್ಳುತ್ತಲೇ ಈ ವಿಚಾರವನ್ನು ಹೌದು ಎಂದು ನಿಖಿಲ್ ಒಪ್ಪಿಕೊಂಡಿದ್ದಾರೆ. ಪಕ್ಷದ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವಾಗ ನೀವು ಕೇಳಿರುವ ಸುದ್ದಿ ನಿಜ ಎಂದಿದ್ದಾರೆ.

‘ಬಹಳ ದಿನಗಳಿಂದ ನೀವೆಲ್ಲಾ ಕೇಳುತ್ತಿರುವ ಸುದ್ದಿ ನಿಜ. ಸಾರ್ವಜನಿಕ ಜೀವನದಲ್ಲಿರುವಾಗ ಕೆಲವೊಂದು ವಿಚಾರಗಳು ಹರಿದುಬರುತ್ತವೆ. ಆದರೆ ನೀವೆಲ್ಲಾ ಕೇಳಿರುವುದು ನಿಜ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ನಿಖಿಲ್ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ