ಪ್ರಚಾರಕ್ಕೆ ಬಂದು ಶಾಲಾ ಮಕ್ಕಳ ಜೊತೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಸೆಲ್ಫೀ ಟೈಂ: ವಿಡಿಯೋ

Krishnaveni K

ಸೋಮವಾರ, 11 ನವೆಂಬರ್ 2024 (14:24 IST)
Photo Credit: X
ಚನ್ನಪಟ್ಟಣ: ಈ ಬಾರಿ ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಇಂದು ಮತಯಾಚನೆ ಮಾಡುವ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಸೆಲ್ಫೀಗೆ ಪೋಸ್ ಕೊಟ್ಟರು.

ಸಂಕೋಚ ಸ್ವಭಾವದ ರೇವತಿ ಹೆಚ್ಚು ಮಾಧ್ಯಮಗಳ ಮುಂದೆ ಮಾತನಾಡುವವರೇ ಅಲ್ಲ. ಆದರೆ ಇದೀಗ ಪತಿ ನಿಖಿಲ್ ಗೆಲುವಿಗಾಗಿ ಚನ್ನಪಟ್ಟಣದಲ್ಲಿ ಓಡಾಡುತ್ತಾ ಪ್ರಚಾರ ನಡೆಸುತ್ತಿದ್ದಾರೆ. ಆದರೂ ಮಾಧ್ಯಮಗಳಿಂದ ದೂರವೇ ಉಳಿದಿದ್ದಾರೆ. ನನ್ನ ಪತಿಗೆ ಒಂದು ಅವಕಾಶ ಕೊಡಿ ಎಂದು ಜನರಲ್ಲಿ ಕೇಳುತ್ತಿದ್ದಾರೆ.

ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಹೀಗಾಗಿ ಪತಿ ಪರ ರೇವತಿ ಪಾದಯಾತ್ರೆ ಮಾಡಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ  ವೇಳೆ ಜೆಡಿಎಸ್ ಶಾಲು, ಪತ್ರ ಹಿಡಿದುಕೊಂಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ನಿಂತು ಮತಯಾಚನೆ ಮಾಡಿದರು. ಈ ವೇಳೆ ಅಲ್ಲಿದ್ದ ಶಾಲಾ ಮಕ್ಕಳು ರೇವತಿ ಜೊತೆ ಸೆಲ್ಫೀಗೆ ಮುಗಿಬಿದ್ದಿದ್ದಾರೆ.

ಒಬ್ಬೊರಾಗಿ ಬಂದು ಶಾಲಾ ಮಕ್ಕಳು ಸೆಲ್ಫೀ ಕೇಳಿದರೆ ರೇವತಿ ಕೂಡಾ ನಗು ನಗುತ್ತಾ ಎಲ್ಲರನ್ನೂ ಮಾತನಾಡಿಸುತ್ತಾ ಸೆಲ್ಫೀ ನೀಡಿದ್ದಾರೆ. ಅಲ್ಲಿ ಸಾಲಾಗಿ ಬಂದ ವಿದ್ಯಾರ್ಥಿಗಳಿಗೆ ಪತ್ರಗಳನ್ನು ನೀಡಿದ್ದಾರೆ. ಅವರಿಗೆ ಜೆಡಿಎಸ್ ಮಹಿಳಾ ಕಾರ್ಯಕರ್ತರೂ ಸಾಥ್ ನೀಡಿದ್ದಾರೆ.

#WATCH | Karnataka by-polls | Revathi Nikhil Kumaraswamy, wife of NDA candidate Nikhil Kumaraswamy held an election campaign in support of him at Channapatna town

(Video source - JDS) pic.twitter.com/3XUDRyd1FH

— ANI (@ANI) November 11, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ