ಮಂಡ್ಯದಲ್ಲಿ ನಿಖಿಲ್ ಸೋಲು?: ಸಿಎಂಗೆ ಶುರುವಾದ ಭೀತಿ
ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಕ್ಷೇತ್ರದಿಂದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಗೆ ಹಿನ್ನಡೆಯಾಗುತ್ತದೆ. ಹೀಗಂತ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಸಿಎಂ ಜೆಡಿಎಸ್ ಶಾಸಕರ ವಿರುದ್ಧ ಗರಂ ಆಗಿದ್ದಾರೆ.
ಮಳವಳ್ಳಿ, ಮಂಡ್ಯ ನಗರ, ಶ್ರೀರಂಗಪಟ್ಟಣಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹಿನ್ನಡೆಯಾಗಬಹುದು. ಹೀಗಂತ ವರದಿ ಸಲ್ಲಿಸಲಾಗಿದೆ. ಈ ವರದಿ ಆಧಾರದಲ್ಲಿ ಈ ಮೂರು ಕ್ಷೇತ್ರಗಳ ಶಾಸಕರ ಜತೆ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ಹಿನ್ನೆಡೆಯಾದರಲ್ಲಿ ನೀವೇ ಜವಾಬ್ದಾರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಮೂರು ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ಹಿನ್ನಡೆಯಾಗಬಲ್ಲದು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ನಿಖಿಲ್ ವಿರುದ್ಧ ದಿ. ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧೆ ಮಾಡಿದ್ದಾರೆ.