ನಿಖಿಲ್ ಕೈ ಹಿಡಿದು ದೀಪ ಬೆಳಗಿ ಸಾರಿದ್ರು ಒಗ್ಗಟ್ಟಿನ ಸಂದೇಶ
ಶುಕ್ರವಾರ, 15 ಮಾರ್ಚ್ 2019 (20:25 IST)
ಚುನಾವಣೆ ಕಣದಲ್ಲಿ ಇದೀಗ ಒಗ್ಗಟ್ಟಿನ ಮಂತ್ರ ಸಾರಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ.
ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ನಿಖಿಲ್ ಕೈ ಹಿಡಿದು ದೀಪ ಬೆಳಗಿಸಿದ ಜಿಲ್ಲೆಯ ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿದರು.
ನಿಖಿಲ್ ಜತೆಗೂಡಿ ದೀಪ ಬೆಳಗಿದ ಜಿಲ್ಲೆಯ ಶಾಸಕರು, ಸಚಿವರು, ದೀಪ ಬೆಳಗುವ ಮೂಲಕ ಒಗ್ಗಟ್ಟಿನ ಸಂದೇಶ ರವಾನೆ ಮಾಡಿದರು.
ನಿಖಿಲ್ ಸ್ಪರ್ಧೆಗೆ ಸ್ವಪಕ್ಷೀಯರಲ್ಲೇ ಅಸಮಾಧಾನ ಎದುರಾಗಿತ್ತು. ಅಸಮಾಧಾನ ಹೋಗಲಾಡಿಸಿ ಒಗ್ಗಟ್ಟಿನ ಸಂದೇಶ ರವಾನೆ ಮಾಡುವಲ್ಲಿ ಪ್ರಮುಖರು ಯಶಸ್ವಿಯಾಗಿದ್ದಾರೆ.
ನಿಖಿಲ್ ಕೈ ಹಿಡಿದು ದೀಪ ಬೆಳಗಿದ ಪುಟ್ಟರಾಜು, ಡಿಸಿ ತಮ್ಮಣ್ಣ, ಎಂ. ಶ್ರೀನಿವಾಸ್, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.