ಮುಗ್ಗರಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಆಸರೆ ನೀಡಿದ ನಿಸಾರ್ ಅಹಮ್ಮದ್

ಶುಕ್ರವಾರ, 22 ಸೆಪ್ಟಂಬರ್ 2017 (09:40 IST)
ಮೈಸೂರು: ದಸರಾಗೆ ಚಾಲನೆ ನೀಡಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹೋಗುವಾಗ ಮುಗ್ಗಿರಿಸಿದ ಘಟನೆ ನಡೆದಿದೆ. ಆದರೆ ಆ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಸಾಹಿತಿ ನಿಸಾರ್ ಅಹಮ್ಮದ್ ಸಿದ್ದರಾಮಯ್ಯನವರಿಗೆ ಆಸರೆ ನೀಡಿದರು.


ವೇದಿಕೆ ಕಡೆಗೆ ಹೋಗುತ್ತಿದ್ದ ಸಿಎಂ ಪಂಚೆ ಕಾಲಿಗೆ ಸುತ್ತಿಕೊಂಡು ಮುಗ್ಗರಿಸಿದರು. ಇನ್ನೇನು ಬೀಳಲಿದ್ದ ಅವರನ್ನು ಪಕ್ಕದಲ್ಲಿಯೇ ಇದ್ದ ನಿಸಾರ್ ಅಹಮ್ಮದ್ ಕೈ ಹಿಡಿದು ತಡೆದರು. ಇದರಿಂದಾಗಿ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.

ನಂತರ ಕಾರ್ಯಕ್ರಮ ಮುಗಿಸಿ ಕಾರಿನ ಬಳಿಗೆ ಆಗಮಿಸುತ್ತಿದ್ದಂತೆ ಕಾಲಿಲ್ಲದ ವೃದ್ಧೆಯೊಬ್ಬರು ಸಿಎಂ ಎದುರು ಸಹಾಯಕ್ಕಾಗಿ ಅಂಗಲಾಚಿದರು. ಈ ಸಂದರ್ಭದಲ್ಲಿ ಆಕೆಗೆ ಮನೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಿಎಂ ತಮ್ಮ ಜೇಬಿನಲ್ಲಿದ್ದ 5 ಸಾವಿರ ರೂ. ನೀಡಿ ಸಾಂತ್ವನ ನೀಡಿದರು.

ಇದನ್ನೂ ಓದಿ.. ದನ, ಕರುಗಳಿದೆಯಾ? ಒಎಲ್ ಎಕ್ಸ್ ನಲ್ಲಿ ಮಾರಿ ಬಿಡಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ