ರೈತರ ಫಲವತ್ತಾದ ಭೂಮಿಯಲ್ಲಿ ಕಾರಿಡಾರ್ ಬೇಡ : ಬೊಮ್ಮಾಯಿ

ಗುರುವಾರ, 2 ಫೆಬ್ರವರಿ 2023 (11:38 IST)
ಬ್ಯಾಡಗಿ ಇಂಡಸ್ಟ್ರಿಯಲ್ ಕಾರಿಡಾರ್ ಭೂಸ್ವಾಧೀನಕ್ಕೆ ರೈತರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಫಲವತ್ತಾದ ಭೂಮಿ ಇರುವ ಕಾರಣ ರೈತರು ವಿರೋಧ ಮಾಡಿದ್ದಾರೆ.

ಎಲ್ಲಿ ಫಲವತ್ತಾದ ಭೂಮಿ ಇರುತ್ತದೆ. ಅದನ್ನು ತೆಗೆದುಕೊಳ್ಳದೆ ಬಂಜರು ಭೂಮಿ ತಗೊಂಡು ಕೈಗಾರಿಕಾ ಕಾರಿಡಾರ್ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ.

ಅದಕ್ಕಾಗಿಯೇ ಬ್ಯಾಡಗಿ ಇಂಡಸ್ಟ್ರಿಯಲ್ ಕಾರಿಡಾರ್ಗೆ ಭೂಸ್ವಾಧೀನ ಪ್ರಕ್ರಿಯೆ ಆದೇಶ ಹಿಂಪಡೆದಿದ್ದೇವೆ. ಹಾವೇರಿ ಜಿಲ್ಲೆಯಲ್ಲಿ ಬೇರೆ ಕಡೆ ಎಲ್ಲಿ ಕಾರಿಡಾರ್ ಮಾಡಬೇಕು ಎಂಬುದರ ಬಗ್ಗೆ ಜಮೀನು ಹುಡುಕಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ