ಸರಕಾರದ ಶಾಲೆಗಿಲ್ಲ ಕರೆಂಟ್..!!
ಹೆಸರಿಗೆ ಬೆಂಗಳೂರು ಸಿಲಿಕಾನ್ ಸಿಟಿ... ದೇಶದ ರಾಜಕೀಯ ಶಕ್ತಿ ಕೇಂದ್ರ ಮತ್ತು ತಂತ್ರಜ್ಞಾನದ ರಾಜಧಾನಿ.. ಆದರೆ ಇಂತಹ ಪ್ರಭಾವಿ ನಗರದಲ್ಲಿ ಸರ್ಕಾರಿ ಶಾಲೆಯೊಂದು ವಿದ್ಯುತ್ ಸಂಪರ್ಕವಿಲ್ಲದೇ ನಡೆಯುತ್ತಿದೆ ಎಂದು ಎಂದರೆ ಅಚ್ಚರಿಯಾಗಬಹುದು...ಹೌದು..ಅಚ್ಚರಿಯಾದರೂ ಇದು ನಿಜ.. ಬೆಂಗಳೂರಿನ ಹೃದಯಭಾಗದಲ್ಲಿರುವ ಸರ್ಕಾರಿ ಶಾಲೆಯೊಂದು ಕಳೆದ ಏಳು ವರ್ಷಗಳಿಂದ ವಿದ್ಯುತ್ ಇಲ್ಲದೆ ನಡೆಯುತ್ತಿದೆ. ಇಲ್ಲಿ ವಿದ್ಯಾರ್ಥಿಗಳು ತೆರೆದ ತರಗತಿಗಳಿಗೆ ಹಾಜರಾಗುತ್ತಿದ್ದು, ಮಳೆ ಬಂದರೆ ತರಗತಿಗಳಿಗೆ ಓಡುತ್ತಾರೆ. ಒಳಗೆ ಕತ್ತಲಾಗಿರುವುದರಿಂದ ಶಾಲೆಗೆ ಒಬ್ಬರೇ ಶಿಕ್ಷಕರು ಮೇಣದಬತ್ತಿಯನ್ನು ಬೆಳಗಿಸಿ ತರಗತಿಗಳನ್ನು ಮುಂದುವರಿಸುತ್ತಾರೆ.