ಆರೆಸ್ಸೆಸ್ ಕಪಿಮುಷ್ಠಿಯಲ್ಲಿರುವ ಕೆಲ ಲಿಂಗಾಯುತ ಮುಖಂಡರು: ಬಿಎಸ್‌ವೈಗೆ ಪಾಟೀಲ್ ಟಾಂಗ್ .

ಮಂಗಳವಾರ, 25 ಜುಲೈ 2017 (15:45 IST)
ನಮ್ಮಲ್ಲಿ ಕೆಲ ಮುಖಂಡರು ಆರೆಸ್ಸೆಸ್ ಕಪಿಮುಷ್ಠಿಯಲ್ಲಿದ್ದಾರೆ. ಹೀಗಾಗಿ ತಮ್ಮ ಸ್ವಾರ್ಥಕ್ಕೆ ಬೇಕಾದ ಹೇಳಿಕೆ ಕೊಡುತ್ತಾರೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.   

ಬಿಎಸ್‌ವೈ ಲಿಂಗಾಯುತ ಧರ್ಮಕ್ಕೆ ಬೆಂಬಲ ಸೂಚಿಸಬೇಕಾಗಿತ್ತು. ಆದರೆ, ಚುನಾವಣೆಯಲ್ಲಿ ತೊಂದರೆಯಾಗುತ್ತದೆ ಎನ್ನುವ ಭಯದಿಂದ ಬೆಂಬಲಿಸುತ್ತಿಲ್ಲ. ಹೀಗಾಗಿ ಬಿ.ಎಸ್.ಯಡಿಯೂರಪ್ಪ ತಪ್ಪು ಮಾಡುತ್ತಿದ್ದಾರೆ ಎಂದು 


ಪ್ರತ್ಯೇಕ ಲಿಂಗಾಯುತ ಧರ್ಮ ಸ್ಥಾಪನೆಯ ಬೇಡಿಕೆ ವಿಚಾರದಲ್ಲಿ ಪೇಜಾವರ ಶ್ರೀಗಳು ಮಧ್ಯಪ್ರವೇಶ ಮಾಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದುಹೇಳಿದ್ದಾರೆ.
 
ಉಡುಪಿ ಶ್ರೀಕೃಷ್ಣಮಠದ ಪೇಜಾವರ ಶ್ರೀಗಳು ಆರೆಸ್ಸೆಸ್ ಸಿದ್ಧಾಂತದ ಕಪಿಮುಷ್ಟಿಯಲ್ಲಿರುವುದರಿಂದ ಅವರ ಮಧ್ಯಪ್ರವೇಶದಿಂದ ಸಮಸ್ಯೆ ಪರಿಇತ್ಯರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ
 
ಪೇಜಾವರ ಶ್ರೀಗಳು ಮಧ್ಯಪ್ರವೇಶಿಸಲು ಬಿಡಲೂ ಬಾರದು. ನಮ್ಮ ಸಮಾಜದಲ್ಲಿಯೇ ಸ್ವಾಮಿಗಳಿದ್ದಾರೆ. ಆದರೆ, ಅವರಲ್ಲಿ ಕೆಲವರು ಬಸವೇಶ್ವರರನ್ನು ನಂಬುವುದಿಲ್ಲ. ಅಂತಹ ಸ್ವಾಮಿಜಿಗಳು ಹಿಂದೂ ಧರ್ಮದಲ್ಲಿಯೇ ಮುಂದುವರಿಯಲಿ ನಮ್ಮ ಯಾವುದೇ ಆಕ್ಷೇಪವಿಲ್ಲ ಎಂದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ