ನಗರದಲ್ಲಿ 60% ಶಾಲೆಗಳಿಗೆ ಅನುಮತಿ ಇಲ್ಲ..!!! ಆರ್. ಅಶೋಕ್

ಮಂಗಳವಾರ, 5 ಏಪ್ರಿಲ್ 2022 (16:53 IST)
ನಗರದ 552 ಶಾಲೆಗಳಿಗೆ(ಅಂದರೆ ಸುಮಾರು 60%) ದಾಖಲೆಗಳೇ ಇರಲಿಲ್ಲ ಎನ್ನುವುದು ಆಶ್ಚರ್ಯಕರ' ಸಂಗತಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
 
ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸಹಯೋಗದಲ್ಲಿ, ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಭೂ ದಾಖಲಾತಿಗಳನ್ನು ಆಯಾ ಎಸ್‌ ಡಿ ಎಮ್ ಸಿ ಹಾಗೂ ಮುಖ್ಯ ಶಿಕ್ಷಕರಿಗೆ ವಿತರಿಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, 'ಸರಿಯಾದ ದಾಖಲೆ ‌ಇಲ್ಲದಿದ್ದರೆ ಒತ್ತುವರಿ ಮಾಡುವವರಿಗೆ ಅನುಕೂಲ.
ಹಲವಾರು ದಾನಿಗಳು ಶಾಲೆ ಸ್ಥಾಪನೆಗೆ ಕೊಟ್ಟ ಜಮೀನು ಶಾಲೆಗಾಗಿಯೇ ಇರಬೇಕು. ಹಾಗಾಗಿ ಎಲ್ಲ ದಾಖಲೆಯನ್ನು ಪಕ್ಕಾ ಮಾಡಿ ಕೊಡುತ್ತಿದ್ದೇವೆ. ನಾನು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ರಾಜ್ಯಾದ್ಯಂತ ಈ ಕಾರ್ಯಕ್ರಮ ನಡೆಯಬೇಕು. ಶಿಕ್ಷಣ ಇಲಾಖೆಯು ಸಹ ಇದರ ಬಗ್ಗೆ ಚಿಂತನೆ ನಡೆಸಲಿ. ಸರ್ಕಾರಿ ಶಾಲೆಗಳ ಭೂಮಿ ರಕ್ಷಣೆಗೆ ಕಂದಾಯ ಇಲಾಖೆ ಮತ್ತು ಸರ್ಕಾರ ಬದ್ಧವಾಗಿದೆ. ಸ್ಮಶಾನ, ಶಾಲೆ, ಅಂಗನವಾಡಿ ಸಲುವಾಗಿ ಭೂಮಿಯನ್ನು ಮೀಸಲಿಡಿ. ಮುಂದೆ ಇವುಗಳಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ನಾನು ಈಗಾಗಲೇ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ