ಮಗ ತೆರಿಗೆ ಕಟ್ಟಿದ್ರೆ ನೋ ಪ್ರಾಬ್ಲಂ!
ಗೃಹಲಕ್ಷ್ಮಿ ಫಾರ್ಮ್ ಓಡಾಡ್ತಿರೋದು ಅಸಲಿ. ಕೆಲವೊಂದು ಬದಲಾವಣೆ ಮಾಡಲಿದ್ದೇವೆ ಅಂತಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬಳಿ ಮಾತನಾಡಿದ ಅವರು, ಬ್ಯಾಂಕ್ ಪಾಸ್ ಬುಕ್ ಸೇರಿಸಲಾಗುವುದು. ಜಾತಿ ಬದಲು ವರ್ಗ ಅಂತ ಹಾಕುತ್ತೇವೆ. ಸಂದೇಶ ತಪ್ಪಾಗಿ ಹೋಗಬಾರದು. ಗಂಡ ತೆರಿಗೆ ಕಟ್ಟಿದ್ರೆ ಗೃಹ ಲಕ್ಷ್ಮಿ ಯೋಜನೆ ಅನ್ವಯ ಆಗಲ್ಲ. ಮಗ ತೆರಿಗೆ ಕಟ್ಟಿದ್ರೆ ತಾಯಿಗೆ 2000 ರೂಪಾಯಿ ಬರುತ್ತೆ ಏನೂ ಸಮಸ್ಯೆ ಆಗಲ್ಲ ಎಂದು ಸಚಿವೆ ತಿಳಿಸಿದ್ದಾರೆ. 90% BPL ಕಾರ್ಡಲ್ಲಿ ಮಹಿಳೆಯರೇ ಪ್ರಮುಖ ಆಗಲಿದ್ದಾರೆ. ಯಾರಿಗೆಲ್ಲಾ ಫಲ ಸಿಗಬೇಕು ಅವರನ್ನ ಸೇರಿಸಲಾಗುತ್ತೆ. ಈಗ ಬಂದಿರೋ ಅರ್ಜಿ ಡ್ರಾಫ್ಟ್ ಮಾತ್ರ. ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಲಿದೆ. ಆಗಸ್ಟ್ 17 ಅಥವಾ 18ರಂದು ನಡೆಯಲಿದೆ ಎಂದರು.