ಡಿಕೆ ಶಿವಕುಮಾರ್ ಗೆ ಸಿಎಂ ಯೋಗ, ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಶಾಕಿಂಗ್ ಭವಿಷ್ಯ

Krishnaveni K

ಬುಧವಾರ, 5 ಮಾರ್ಚ್ 2025 (11:58 IST)
ಬೆಂಗಳೂರು: ಡಿಕೆ ಶಿವಕುಮಾರ್ ಗೆ ಸಿಎಂ ಯೋಗವಿದೆಯೇ ಎಂಬ ಬಗ್ಗೆ ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದು ಇಲ್ಲಿದೆ ನೋಡಿ  ವಿವರ.

ರಾಜ್ಯದಲ್ಲಿ ಈಗ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಅತ್ತ ಡಿಕೆ ಶಿವಕುಮಾರ್ ಕೂಡಾ ಬಹಿರಂಗವಾಗಿಯೇ ಮುಂದಿನ ಚುನಾವಣೆಗೆ ನನ್ನದೇ ನೇತೃತ್ವ ಎಂದಿದ್ದಾರೆ.

ಹೀಗಿರುವಾಗ ಡಿಕೆ ಶಿವಕುಮಾರ್ ಪರ ಈಗ ಮಠಾಧೀಶರೂ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈಗ ನೊಣವಿನಕೆರೆ ಸ್ವಾಮೀಜಿಗಳು ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಹೇಳಿಕೆ ನೀಡಿದ್ದು, ದೇವರ ಆಶೀರ್ವಾದದಿಂದ ಅವರು ಸಿಎಂ ಆಗಿಯೇ ಆಗುತ್ತಾರೆ ಎಂದಿದ್ದಾರೆ.

ಶ್ರೀಮಠದ ಆಶೀರ್ವಾದದಿಂದ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ನಾಡಿನ ರೈತರು, ವರ್ತಕರು, ಮಠದ ಭಕ್ತರ ಆಸೆಯೂ ಇದೇ ಆಗಿದೆ. ಯಾವಾಗ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಮುಂದೆ ಡಿಕೆ ಶಿವಕುಮಾರ್ ಸಿಎಂ ಆಗಿಯೇ ಆಗುತ್ತಾರೆ ಎಂದು ಅಜ್ಜಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ