ಹಿಜಾಬ್ ವಿವಾದ: ಪಿಯುಸಿ ಪರೀಕ್ಷೆಯಿಂದ ಹೊರನಡೆದ ಇಬ್ಬರು ವಿದ್ಯಾರ್ಥಿನಿಯರು!
ಪರೀಕ್ಷೆ ಹಾಲ್ ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಇಬ್ಬರು ವಿದ್ಯಾರ್ಥೀನಿಯರು ಪರೀಕ್ಷೆಗೆ ಹಾಜರಾಗದೇ ವಾಪಸ್ ಹೋದ ಘಟನೆ ನಡೆದಿದೆ.
ರಾಜ್ಯ ಸರಕಾರ ಪಿಯುಸಿ ಪರೀಕ್ಷೆ ವೇಳೆ ಸಮವಸ್ತ್ರ ಧರಿಸುವುದು ಕಡ್ಡಾಯ. ಯಾವುದೇ ಧಾರ್ಮಿಕ ಚಿಹ್ನೆ ಬಳಸುವ ವಸ್ತ್ರ ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿತ್ತು.
ವಿದ್ಯಾರ್ಥಿನಿಯರಾದ ರೇಷ್ಮಾ ಮತ್ತು ಆಲಿಯಾ ಆಸಾದಿ ಎಂಬ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಲ್ ಟಿಕೆಟ್ ಪಡೆದು ಪರೀಕ್ಷೆ ಬರೆಯಲು ವಿದ್ಯೋದಯ ಪಿಯು ಕಾಲೇಜ್ ಹಾಲ್ ಗೆ ಬಂದಿದ್ದರು. ಆದರೆ ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗುಂತೆ ಶಿಕ್ಷಕರು ಸೂಚಿಸಿ ಹಿನ್ನೆಲೆಯಲ್ಲಿ ವಾಪಸ್ ಮನೆಗೆ ತೆರಳಿದ್ದಾರೆ.