ಬೆಂಗಳೂರು : ಅಜಾನ್ ವಿವಾದದ ಬಿಸಿ ಇರುವಾಗಲೇ ಹಿಂದೂ ಮುಖಂಡರು ಮತ್ತೊಂದು ಬೇಡಿಕೆ ಇಟ್ಟಿದ್ದು,
ಹಿಂದೂ ದೇವಾಲಯಗಳಲ್ಲಿ ಸುಪ್ರಭಾತ ಸೇವೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಐದು ತಿಂಗಳಿಂದ ಧರ್ಮ ದಂಗಲ್ ನಡೆಯುತ್ತಿದೆ. ಹಿಜಬ್, ಹಲಾಲ್, ಆಜಾನ್ ಹೀಗೆ ಅನೇಕ ವಿಷಯಗಳಲ್ಲಿ ವಿವಾದ ನಡೆಯುತ್ತಿದೆ.
ಇದೆಲ್ಲದರ ಬಿಸಿ ಇನ್ನೂ ಇರುವಾಗಲೇ ಹಿಂದೂ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಹರ್ಷ ಮುತಾಲಿಕ್ ಧಾರ್ಮಿಕ ದತ್ತಿಗೆ ಮನವಿ ಸಲ್ಲಿಸಿ ಪ್ರತಿದಿನ ಬೆಳಗ್ಗೆ ಸುಪ್ರಭಾತ ಸೇವೆಗೆ ಅನುಮತಿ ನೀಡಿ ಎಂದಿದ್ದಾರೆ.
ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ಪ್ರತಿದಿನ ಬೆಳಗ್ಗೆ ಸುಪ್ರಭಾತ ಹಾಕಲು ಹಾಗೂ ವಿಶೇಷ ದಿನಗಳಲ್ಲಿ ಪೂಜೆ ಮತ್ತು ಕೈಕರ್ಯಗಳನ್ನು ಮೈಕ್ನ ಮೂಲಕ ಪಠಿಸಲು ಸರಿಯಾದ ಉಪಕರಣಗಳನ್ನು ಬಳಸಲು ನೀಡಬೇಕು.