ಅಶ್ವಥ್ ನಾರಾಯಣ್ ಅಲ್ಲ, ನವರಂಗಿ ನಾರಾಯಣ್- ಡಿಕೆಶಿವಕುಮಾರ್

ಸೋಮವಾರ, 14 ಆಗಸ್ಟ್ 2023 (13:38 IST)
ಮಾಜಿ ಸಚಿವ ಅಶ್ವತ್ಥ ನಾರಾಯಣ್ ಆರೋಪ ವಿಚಾರಾವಾಗಿ ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿದ ಅವರು ಅವನು ಅಶ್ವಥ್ ನಾರಾಯಣ ಅಲ್ಲ, ನವರಂಗಿ ನಾರಾಯಣ.ಕಳ್ಳರನ್ನ ರಕ್ಷಣೆ ಮಾಡೋದ್ರಲ್ಲಿ ಅವರಿಗೆ ಡಾಕ್ಟರೇಟ್ ಕೊಡಬೇಕು.ರಾಮನಗರಕ್ಕೆ ಬಂದು ಕ್ಲೀನ್ ಮಾಡ್ತೀನಿ ಅಂದ್ರು. ಅವರ ಪಾರ್ಟೀನೇ ಕ್ಲೀನ್ ಮಾಡಿ ಹೋದ್ರು.
 
ಆ ಮೆಂಟಲ್ ಟೆನ್ಷನ್‌ನಲ್ಲಿ ಇದಾರೆ. ಬೆಂಗಳೂರು ನಗರದಲ್ಲಿ, ಅವರ ಇಲಾಖೆಯಲ್ಲಿ ಏನು ಮಾಡಿದ್ರು ಅಂತ ಇನ್ನೂ ತೆಗೆದಿಲ್ಲ.ಟೈಮ್ ಬರುತ್ತೆ ಆಗ ಎಲ್ಲವೂ ಗೊತ್ತಾಗಲಿದೆ. ಕಂಪ್ಲೀಟ್ ಏನು ಮಾಡಿದ್ರು, ಹೇಗೆ ಎತ್ತಿ ಕಟ್ಟಿದ್ರು ಗೊತ್ತಾಗ್ತಿದೆ.ಕೆಲಸ ಯಾರು ಮಾಡಿದಾರೆ, ಯಾರು ನಿಜವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ತನಿಖೆ ಮಾಡುವ ಕೆಲಸ ಮಾಡ್ತಿದೆ.ಇದಕ್ಕೆ ಏನೆಲ್ಲಾ ಆಟ ಆಡ್ತಿದ್ದಾರೆ, ಏನ್ ಗೇಮ್ ಮಾಡ್ತಿದ್ದಾರೆ ಮಾಡಲಿ.ಮೊನ್ನೆಯೇ ಈ ಬಗ್ಗೆ ಮಾತನಾಡಬೇಕಿತ್ತು.ಆದ್ರೆ ಬಿಬಿಎಂಪಿಯಲ್ಲಿ ಒಂದು ಆಕ್ಸಿಡೆಂಟ್ ಆಯ್ತು.
 
ಇಂದೂ ಬೇಡ ಪಾರ್ಟಿ ಕೆಲಸ ಇದೆ. ಇಂಡಿಪೆಂಡೆನ್ಸ್ ಡೇ ಮುಗೀಲಿ ಮಾತಾನಾಡುತ್ತೇನೆ ಎಂದರು. ಇನ್ನೂ ಕಮೀಷನ್ ಪಡೆದಿಲ್ಲ ಅನ್ನೋದಾದ್ರೆ ಅಜ್ಜಯ್ಯನ ಮೇಲೆ ಆಣೆ ಮಾಡುವಂತೆ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿ ಸಿ.ಟಿ ರವಿಗೂನೂ ಟ್ರೀಟ್ಮೆಂಟ್ ಬೇಕಿದೆ ಕೊಡೋಣ ಎಂದ ವ್ಯಂಗ್ಯವಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ