ಕುಖ್ಯಾತ ಡ್ರಗ್ಸ್ ಡೀಲರ್ ಬಂಧನ – ಕೋಟಿ ಕೋಟಿ ಮೌಲ್ಯದ ಗಾಂಜಾ ವಶ
ಕೋಟ್ಯಂತರ ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿದ್ದ ಖದೀಮರ ಜಾಲವನ್ನು ರಾಜಧಾನಿ ಪೊಲೀಸರು ಪತ್ತೆ ಹಚ್ಚಿದ್ದರು.
ಪ್ರತಿಷ್ಠಿತ ಶಾಲೆ, ಕಾಲೇಜ್ ಗಳ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲಾಗುತ್ತಿತ್ತು.
ಕೆನಡಾದಿಂದ ತರಿಸಿದ ಹೈಡ್ರೋ ಗಾಂಜಾವನ್ನು ಅಮೆಜಾನ್ ಕವರ್ ಗಳಿಂದ ಪ್ಯಾಕ್ ಮಾಡಿಸಿ ಬೆಂಗಳೂರು ಸೇರಿದಂತೆ ಇತರ ಕಡೆ ಮಾರಾಟ ಮಾಡಲಾಗುತ್ತಿತ್ತು.
ಕೋಲ್ಕತ್ತಾದ ಹತೀಫ್ ಸಲೀಂ, ರೋಹಿತ್ ದಾಸ್ ನನ್ನು ಬಂಧನ ಮಾಡಲಾಗಿದ್ದು, ಬಂಧಿತರಿಂದ 1 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.