ಹಿಂದೂ-ಮುಸ್ಲಿಂ ಧರ್ಮಗಳ ಮಧ್ಯೆ ಎರಡು ಗುಂಪುಗಳ ಮಧ್ಯೆ ಎದ್ದಿರುವ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ..ದೇವಸ್ಥಾನಗಳಲ್ಲಿನ ಜಾತ್ರೆ, ಮಾವು ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್-ಝಟ್ಕಾ ಕಟ್ ಮಾಂಸ ಖರೀದಿ ಅಭಿಯಾನಗಳ ಬಳಿಕ ಇದೀಗ ಅಕ್ಷಯ ತೃತೀಯದಂದು ಖರೀದಿಸುವ ಚಿನ್ನದ ವಿಚಾರದಲ್ಲೂ ಹಿಂದೂಪರ ಸಂಘಟನೆಗಳು ಅಭಿಯಾನ ಪ್ರಾರಂಭಿಸಿವೆ. ಎಲ್ಲ ಹಿಂದೂಗಳು ಹಿಂದೂ ಮಾಲೀಕತ್ವದ ಆಭರಣದ ಅಂಗಡಿಗಳಲ್ಲೇ ಚಿನ್ನ ಖರೀದಿಸಬೇಕು ಎಂದು ಕರೆ ನೀಡಿವೆ. ಮುಸ್ಲಿಮರ ಅಂಗಡಿಯಲ್ಲಿ ಖರೀದಿಸಿದ ಚಿನ್ನದ ಲಾಭಾಂಶದ ಪಾಲು ಕೇರಳದಲ್ಲಿ ಲವ್ ಜಿಹಾದ್, ಮತಾಂತರಗಳಿಗೆ ಬಳಕೆಯಾಗುತ್ತದೆ ಎಂದು ಆರೋಪಿಸಿವೆ..ಈ ಬಗ್ಗೆ ಟ್ವೀಟರ್‌ನಲ್ಲಿ ಪ್ರಾರಂಭವಾಗಿರುವ ಅಭಿಯಾನಕ್ಕೆ ಶ್ರೀರಾಮಸೇನೆ ಬೆಂಬಲ ವ್ಯಕ್ತಪಡಿಸಿದೆ.