ಆಭರಣ ಪ್ರೀಯರಿಗೆ ಬಿಗ್ ಶಾಕ್

ಮಂಗಳವಾರ, 8 ಮಾರ್ಚ್ 2022 (20:20 IST)
ರಷ್ಯಾ, ಉಕ್ರೇನ್ ನಡುವಿನ ಯುದ್ಧ ಭೀಕರ ಸ್ವರೂಪ ಪಡೆಯುತ್ತಿರುವ ನಡುವೆಯೇ ಭಾರತದಲ್ಲಿ ಹಳದಿ ಲೋಹದ ಬೆಲೆ ಏರಿಕೆ ಯಥಾಸ್ಥಿತಿಯಲ್ಲಿ ಮುಂದುವರಿದಿರುವುದಾಗಿ ವರದಿ ತಿಳಿಸಿದೆ.
 
ಇಂದಿನ ಮಾರುಕಟ್ಟೆಯ ಮಾಹಿತಿ ಪ್ರಕಾರ, ಕೆಲವು ದಿನಗಳಲ್ಲಿ 10 ಗ್ರಾಮ್ ಚಿನ್ನದ ಬೆಲೆ 51,780 ರೂಪಾಯಿಗೆ ಇಳಿಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಒಂದು ಕೆಜಿ ಬೆಳ್ಳಿ ಬೆಲೆ 67,918 ರೂಪಾಯಿಗೆ ತಲುಪಲಿದೆ ಎಂದು ವರದಿ ತಿಳಿಸಿದೆ.
 
ದಾಖಲೆಯ ಮೊತ್ತಕ್ಕೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 52,040 ರೂಪಾಯಿ, 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 47,700 ರೂಪಾಯಿ.
 
ರಷ್ಯಾ ಯುದ್ಧದ ಪರಿಣಾಮ; ಷೇರುಪೇಟೆ ಸೆನ್ಸೆಕ್ಸ್ ಇಳಿಕೆ, ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ
ರಷ್ಯಾ ಯುದ್ಧದ ಪರಿಣಾಮ; ಷೇರುಪೇಟೆ ಸೆನ್ಸೆಕ್ಸ್ ಇಳಿಕೆ, ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ
 
ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್
ಮಾರ್ಚ್ 1ರಂದು 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 50,950 ರೂಪಾಯಿಯಷ್ಟಿದ್ದು, 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 46,700 ರೂಪಾಯಿಯಷ್ಟಿತ್ತು.
 
 
ಚೆನ್ನೈಯಲ್ಲಿ ಇಂದು 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 53,200 ರೂಪಾಯಿ, 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 48,750 ರೂಪಾಯಿ. ಮುಂಬಯಿಯಲ್ಲಿ 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 52,040 ರೂಪಾಯಿ, 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 47,700 ರೂಪಾಯಿ.
 
ದೆಹಲಿಯಲ್ಲಿ 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 52,040 ರೂಪಾಯಿ, 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 47,700 ರೂಪಾಯಿ ಎಂದು ವರದಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ