ಶಿಕ್ಷಣ ಸಚಿವರ ಮನೆ ಮೇಲೆ NSUI ದಾಳಿ
ಇಂದು ತುಮಕೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಬಿ.ಸಿನಾಗೇಶ್ ಮನೆ ಮೇಲೆ ಎನ್ಎಸ್ಯುಐಯವರು ದಾಂಧಲೆ ಮಾಡಿದ್ದಾರೆ.
ಮನೆ ಬಳಿ ಬೆಂಕಿ ಹಚ್ಚುವ ಕೆಲಸ ಕೂಡ ಮಾಡಿದ್ದಾರೆ. ಇದು ಎನ್ಎಸ್ಯುಐ ಗೂಂಡಾ ವರ್ತನೆ. ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು.
ಇಂತಹ ವರ್ತನೆ ಇನ್ನು ಮುಂದೆ ನಡೆಯಬಾರದು. ಬೆಂಗಳೂರಿನಿಂದ 5 ಜನ, ಭದ್ರಾವತಿಯಿಂದ ಒಬ್ಬ, ಚಿಕ್ಜಮಕಗಳೂರು, ದಾವಣಗೆರೆಯಿಂದ ತಲಾ ಇಬ್ಬರು ಬಂದಿದ್ದಾರೆ.