243 ವಾರ್ಡ್ ಗಳ ಪುನರ್ ವಿಂಗಡಣೆ ವರದಿ ಸಲ್ಲಿಸಿದ ಬಿಬಿಎಂಪಿ
ಬುಧವಾರ, 1 ಜೂನ್ 2022 (20:26 IST)
243 ವಾರ್ಡ್ ಗಳ ಪುನರ್ ವಿಂಗಡಣೆ ವರದಿ ಸಲ್ಲಿಸಿದ ಬಿಬಿಎಂಪಿ .ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬುಧವಾರ 243 ವಾರ್ಡ್ ಗಳಿಗೆ ಏರಿಕೆಯಾಗಿರುವ ವಾರ್ಡ್ ಗಳ ಪುನರ್ ವಿಂಗಡಣೆ ಪಟ್ಟಿಯಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಈ ಮೂಲಕ ಬಿಬಿಎಂಪಿ ಚುನಾವಣೆ ಸಿದ್ಧತೆ ಮತ್ತಷ್ಟು ಚುರುಕುಗೊಂಡಂತಾಗಿದೆ.
ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲು ಪಟ್ಟಿಯನ್ನು ೮ ವಾರದೊಳಗೆ ಅಂತಿಮಗೊಳಿಸಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಲ್ಲಿಸಿದ ವಾರ್ಡ್ ಪುನರ್ ವಿಂಗಡಣೆ ವರದಿ ಪ್ರಾಮುಖ್ಯತೆ ಪಡೆದಿದೆ.
೧೯೮ ವಾರ್ಡ್ ಗಳಿಗೆ ವಿಸ್ತಾರಗೊಂಡಿದ್ದ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ ೨೪೩ಕ್ಕೆ ಏರಿಸಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 85 ಲಕ್ಷ ಮತದಾರರನ್ನು ಗುರುತು ಮಾಡಲಾಗಿದ್ದು, ಒಂದು ವಾರ್ಡ್ ಗೆ ಸರಾಸರಿ 35 ಸಾವಿರ ಜನ ಸಂಖ್ಯೆ ಆಧಾರದ ಮೇರೆಗೆ ವಾರ್ಡ್ ವಿಂಗಡಣೆ ಮಾಡಲಾಗಿದ್ದು, 2011ರ ಜನಗಣತಿ ಪ್ರಕಾರ ವಾರ್ಡ್ ಪುನರ್ ವಿಂಗಡಣೆ ಮಾಡಲಾಗಿದೆ.
ಸರ್ಕಾರದ ಅನುಮೋದನೆ ಸಿಕ್ಕ ಬೆನ್ನಲ್ಲೇ ಸಾರ್ವಜನಿಕ ಆಕ್ಷೇಪಣೆಗೆ ವಾರ್ಡ್ ವಿಂಗಡಣೆ ಪಟ್ಟಿ ಮುಂದಿಡಲಿರುವ ಬಿಬಿಎಂಪಿ, ಸಾರ್ವಜನಿಕ ಆಕ್ಷೇಪಣೆಗೆ ೭ ದಿನಗಳ ಗಡುವು ನೀಡಲಿದೆ.