ರೌಡಿ ಶೀಟರ್​ ಕೊಲೆಗೆ ಐವರಿಂದ ಹತ್ಯೆ, ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆ

ಸೋಮವಾರ, 13 ಸೆಪ್ಟಂಬರ್ 2021 (21:55 IST)
ಬೆಂಗಳೂರು: ಫುಟ್ಬಾಲ್ ಸ್ಟೇಡಿಯಂ ಬಳಿ ನಿನ್ನೆ ಸಂಜೆ 4.30 ಕ್ಕೆ ರೌಡಿ ಶೀಟರ್ ಅರವಿಂದ್ (30) ನನ್ನನ್ನು ದುಷ್ಕರ್ಮಿಗಳ ಗುಂಪು ಕೊಚ್ಚಿ ಕೊಲೆ ಮಾಡಿತು. ಪುಲಿಕೇಶಿ ನಗರದ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ನನ್ನು ಕೆಲವು ದಿನಗಳ ಹಿಂದೆ ಗೂಂಡಾ ಆಕ್ಟ್ ನಲ್ಲಿ ಭಾರತ ನಗರ ಜೈಲಿಗೆ ಕಳುಹಿಸಲಾಗಿದೆ. ಜಾಮೀನಿನ ಮೇಲೆ ಇತ್ತೀಚೆಗೆ ಹೊರಬಂದಿದ್ದ ಈತನನ್ನು ದುಷ್ಕರ್ಮಿಗಳು ಕೊಲೆಮಾಡಿದ್ದು, ಹತ್ಯೆಯ ಪ್ರಕರಣದಲ್ಲಿ ಮಹತ್ವದ ಸಂಗತಿಗಳು ಹೊರಬಂದಿದ್ದು ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐವರಿಂದ ಅಟ್ಟ್ಯಾಕ್ ನೆಡೆದಿರುವುದು ಕೂಡ ಬೆಳಕಿಗೆ ಬಂದಿದೆ.  
 
ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ ಅರವಿಂದ್​ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಭಾರತಿನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದ ಅರವಿಂದ್​, ಪುಟ್​ಬಾಲ್​ ತಂಡವೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ಎಂದಿನಂತೆ ಆಟವಾಡಲು ಸ್ನೇಹಿತರ ಜೊತೆ ಕೆಎಸ್​ಎಫ್​ಎ ಮುಂಭಾಗದ ಬಿಬಿಎಂಪಿ ಮೈದಾನಕ್ಕೆ ಬಂದಿದ್ದ, ಆಟವಾಡಿದ ಮೇಲೆ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಹಣ್ಣಿನ ರಸ ಕುಡಿಯುತ್ತಿದ್ದ. ಆದರೆ ಅಲ್ಲಿಂದ ತಪ್ಪಿಸಿಕೊಂಡು ಅರವಿಂದ್ ಸ್ಟೇಡಿಯಂ ಚಾಂಪೌಂಡ್ ಒಳಗೆ ನುಗ್ಗಿದ್ದ. ಸ್ಟೇಡಿಯಂಗೆ ನುಗ್ಗಿ ಮೊದಲು ಹುಡುಕಾಟ ನಡೆಸಿದ್ದ ಹಂತಕರು. ಹಂತಕರ ಅಬ್ಬರಕ್ಕೆ ಅಡಗಿ ಕೂತಿದ್ದ ಅರವಿಂದ್ ನಂತರ ಮಾರಾಕಾಸ್ತ್ರಗಳಿಂದ ನೇರಾನೇರ ಮುಖ ತಲೆಗೆ ಹೊಡೆದಿದ್ದಾರೆ. ಕೊನೆಗೂ ಬಚ್ಚಿಟ್ಟುಕೊಂಡವನನ್ನು ಎಳೆತಂದು ಮುಗಿಸಿ ಬಿಟ್ಟಿದ್ದಾರೆ.
 
ತಪ್ಪಿಸಿಕೊಳ್ಳಲು ರೆಫ್ರಿ ತಂತ್ರಜ್ಞಾನದೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡರೂ ಬಿಡದ ದುಷ್ಕರ್ಮಿಗಳು ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗುತ್ತಿದೆ. ಹಲ್ಲೆಗೆ ಒಳಗಾಗ ಮೃತ ಅರವಿಂದ್ ತೀವ್ರ ರಕ್ತಸ್ರಾವದಿಂದ ಸಾವನಪ್ಪಿದ್ದಾನೆ. ಇನ್ನು ಈ ಹಲ್ಲೆ ಅಶೋಕನಗರದ ಸ್ಟೇಟ್ ಫುಲ್ಬಾಲ್ ಅಸೋಸಿಯೇಷನ್ ​​ಆವರಣದಲ್ಲಿ ನಡೆದಿದ್ದು, ಅಸೋಸಿಯೇಶನ್ ಮುಖ್ಯ ದ್ವಾರದ ಸಿಸಿಟಿವಿಯಲ್ಲಿನ ಭೀಕರ ಕೃತ್ಯ ಸೆರೆಯಾಗಿದೆ.
ಕ್ರಿಯೋ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ