ಮಹಾರಾಷ್ಟ್ರದಲ್ಲಿ ಒಟ್ಟು 88 ಪ್ರಕರಣಗಳು ದಾಖಲಾಗಿದ್ದು, ದೆಹಲಿ (64), ತೆಲಂಗಾಣ (38) ಮೊದಲ ಮೂರು ಸ್ಥಾನಗಳಲ್ಲಿವೆ. ಬುಧವಾರ ವರೆಗೆ ಕೇವಲ ಒಂದು ಪ್ರಕರಣ ಬೆಳಕಿಗೆ ಬಂದಿದ್ದ ತಮಿಳುನಾಡಿನಲ್ಲಿ ವೇಗವಾಗಿ ಹರಡುವ ಈ ಪ್ರಬೇಧದ ಸೋಂಕಿತರ ಸಂಖ್ಯೆ 34ಕ್ಕೆ ಏರಿದ್ದು, ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ.
ಮಹಾರಾಷ್ಟ್ರದಲ್ಲಿ 23 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 17 ಮಂದಿಗೆ ಯಾವುದೇ ರೋಗಲಕ್ಷಣ ಇಲ್ಲ ಹಾಗೂ ಉಳಿದ ಆರು ಮಂದಿಯಲ್ಲಿ ಅಲ್ಪ ಪ್ರಮಾಣದ ಲಕ್ಷಣಗಳು ಕಂಡುಬಂದಿವೆ. ನಾಲ್ವರು ಹೊಸ ಸೋಂಕಿತರು 18 ವರ್ಷಕ್ಕಿಂತ ಕೆಳಗಿನವರು. ಹೊಸ ಪ್ರಕರಣಗಳ ಪೈಕಿ 13 ಪುಣೆಯಿಂದ, ಐದು ಮುಂಬೈ ಹಾಗೂ 2 ಉಸ್ಮನಾಬಾದ್ ನಿಂದ, ಥಾಣೆ, ನಾಗ್ಪುರ ಹಾಗೂ ಮಿರಾ ಭಯಂದೆರ್ ನಿಂದ ತಲಾ ಒಂದು ಪ್ರಕರಣಗಳು ವರದಿಯಾಗಿವೆ.