ಈಗಾಗಲೇ ಬೆಂಗಳೂರಿನ ಬಹುತೇಕ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಪ್ರತೀ ಕೆ.ಜಿ.ಗೆ 70 ರಿಂದ 80 ರೂ.ವರೆಗೆ ತಲುಪಿದೆ. ಅಕಾಲಿಕ ಮಳೆ, ಕೆಲವೆಡೆ ಮಳೆಯ ಕೊರತೆಯಿಂದಾಗಿ ಈರುಳ್ಳಿ ಬೆಲೆ ದಿಡೀರ್ ಏರಿಕೆಯಾಗುತ್ತಿದೆ. ಈ ಮೊದಲು ಈರುಳ್ಳಿ 50 ರೂ.ವರೆಗಿತ್ತು. ಆದರೆ ಈಗ ಶತಕದತ್ತ ದಾಪುಗಾಲಿಡುತ್ತಿದೆ.
ಇನ್ನು ಎರಡೇ ದಿನಗಳಲ್ಲಿ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ 100 ರೂ.ಗೆ ಏರಿಕೆಯಾಗಲಿದೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ತಮಿಳುನಾಡಿನಲ್ಲೂ ಇದೇ ಕತೆ. ಅಲ್ಲಿ ಈಗಾಗಲೇ ಈರುಳ್ಳಿ ಬೆಲೆ ಪ್ರತೀ ಕೆ.ಜಿ.ಗೆ 100 ರೂ. ತಲುಪಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡಿನಲ್ಲಿ ಅಕಾಲಿಕವಾಗಿ ಮಳೆಯಾಗಿರುವುದೇ ಇದಕ್ಕೆ ಕಾರಣ.