ಐಪಿಎಲ್​​ ಹರಾಜಿನಲ್ಲಿದ್ದಾರೆ ಬರೋಬ್ಬರಿ 1165 ಮಂದಿ ಭಾರತೀಯರು, 409 ವಿದೇಶಿ ಆಟಗಾರರು

Sampriya

ಬುಧವಾರ, 6 ನವೆಂಬರ್ 2024 (19:42 IST)
Photo Courtesy X
ಬೆಂಗಳೂರು: 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಕ್ರೇಜ್​ ​ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 18ನೇ ಐಪಿಎಲ್​ ಸೀಸನ್​ಗೆ ಇದೇ 24 ಮತ್ತು 25ರಂದು ಮಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ 10 ಐಪಿಎಲ್​​ ತಂಡಗಳು ಭಾಗಿಯಾಗಲಿದ್ದು, ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲಿವೆ.

ಐಪಿಎಲ್​ ತಂಡಗಳು ರೀಟೈನ್​​ ಲಿಸ್ಟ್​ ಸಲ್ಲಿಸಲು ಅಕ್ಟೋಬರ್​​ 31ನೇ ತಾರೀಕು ಕೊನೆಯ ದಿನವಾಗಿತ್ತು. ಈಗಾಗಲೇ 10 ಐಪಿಎಲ್​ ತಂಡಗಳು ರೀಟೈನ್​​ ಲಿಸ್ಟ್​​​ ಬಿಸಿಸಿಐಗೆ ಸಲ್ಲಿಸಿವೆ. ಮಾಲೀಕರು ಅಳೆದು ತೂಗಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಿದ್ದಾರೆ. ರಿಲೀಸ್​ ಮಾಡಲಾದ ಆಟಗಾರರನ್ನು ಪಟ್ಟಿ ಮಾಡುವ ಕೆಲಸ ಬಿಸಿಸಿಐ ಮಾಡುತ್ತಿದೆ.  

ಈ ಬಾರಿ ಹರಾಜಿಗೆ ಸ್ಟಾರ್​ ಆಟಗಾರರೇ ಎಂಟ್ರಿ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೈ ಬಿಟ್ಟ ರಿಷಭ್‌​ ಪಂತ್​​, ಲಕ್ನೋ ಸೂಪರ್​​ ಜೈಂಟ್ಸ್​ ತಂಡದಿಂದ ಹೊರ ಬಂದ ಕನ್ನಡಿಗ ಕೆ.ಎಲ್​ ರಾಹುಲ್​​, ಕೆಕೆಆರ್​ನಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್​, ಮುಂಬೈ ಇಂಡಿಯನ್ಸ್​ ಕೈ ಬಿಟ್ಟ ಇಶಾನ್​ ಕಿಶನ್​ ಸೇರಿ ಹಲವು ಸ್ಟಾರ್​ ಆಟಗಾರರು ಮೆಗಾ ಹರಾಜಿಗೆ ಬಂದಿದ್ದಾರೆ.

ಅನ್​ಕ್ಯಾಪ್ಡ್​ ಸೇರಿದಂತೆ ಬರೋಬ್ಬರಿ 1165 ಮಂದಿ ಭಾರತೀಯ ಆಟಗಾರರು ಐಪಿಎಲ್​​​ ಹರಾಜಿಗೆ ನೋಂದಣಿ​ ಮಾಡಿಸಿದ್ದಾರೆ.  16 ದೇಶಗಳ ಒಟ್ಟು 409 ಆಟಗಾರರು ಭಾಗವಹಿಸಲಿದ್ದಾರೆ. ಈ ಪೈಕಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿರೋ 272 ಆಟಗಾರರು ಇದ್ದಾರೆ. 104 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ