ಬೆಳೆಗಾರರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ!

ಸೋಮವಾರ, 9 ಜುಲೈ 2018 (18:27 IST)
ಕೋಟೆ ನಾಡಿನಲ್ಲಿ ರೈತ ಸದಾ ಒಂದಲ್ಲ   ಒಂದು ಸಮಸ್ಯೆಯಲ್ಲಿ ಸಿಲುಕುತ್ತಿದ್ದಾನೆ. ಅದರಂತೆ  ಮಳೆಯನ್ನೆ ನಂಬಿ  ಬಿತ್ತಿದ್ದ ಈರುಳ್ಳಿ ಮೊಳಕೆಯೊಡೆದಿವೆ. ಆದ್ರೆ  ಇದೀಗ ಮಳೆಯೂ ಕೈ ಕೊಡುತ್ತಿದೆ. ಇತ್ತ ಕೊಳವೆ ಬಾವಿಯಲ್ಲೂ ಕೂಡ ನೀರಿನ ಪ್ರಮಾಣ ಕಡಿಮೆ ಆಗ್ತಾ ಇರೊದು ಈರುಳ್ಳಿ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಒಂದು ವೇಳೆ ಮಳೆ ಬಂದು ಉತ್ತಮ ಬೆಲೆ ಸಿಗದೆ ಹೋದ್ರೆ ಈ ಭಾಗದ ರೈತರನ್ನ ದೇವರೇ ಕಾಪಾಡಬೇಕಾಗಿದೆ.  

ಚಿತ್ರದುರ್ಗ ಕೋಟೆ  ನಾಡಿನಲ್ಲಿ  ಪ್ರಮುಖ ಬೆಳೆಗಳಲ್ಲಿ ರಾಗಿ ಮುಸುಕಿನ ಜೋಳ ಹಾಗೂ ತೊಟಗಾರಿಕೆ ಬೆಳೆಗಳಿಗೆ ಬಂದ್ರೆ ಈರುಳ್ಳಿ ಪ್ರಮುಖವಾಗುತ್ತದೆ. ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಹೆಚ್ಚಾಗ  ಈರುಳ್ಳಿ ಬೆಳೆಗಳನ್ನು ಬೆಳೆಯುತ್ತಾರೆ. ಇದುವರೆಗೂ 17 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ರೈತರು ಈರುಳ್ಳಿಯನ್ನು ಬಿತ್ತಿದ್ದಾರೆ. ಇದುವರೆಗೂ ಬಿದ್ದಿದ್ದ   ಅಲ್ಪ ಸ್ವಲ್ಪ ಮಳೆಯಿಂದಾಗಿ ಈರುಳ್ಳಿ ಬೀಜ ಮೊಳಕೆ ಯೊಡೆದು   ಸಣ್ಣ ಸಣ್ಣ ಗಿಡಗಳಾಗಿ ಬೆಳೆದು ನಿಂತಿವೆ. ಸರಿಯಾದ ಸಮಯಕ್ಕೆ ವರುಣ ಕೈ ಕೊಟ್ಟಿರುವುದರಿಂದ  ಚಿಗುರೊಡೆದ ಈರುಳ್ಳಿ ಮೊಳಕೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಯನ್ನು ಆಧರಿಸಿ ಸುಮಾರು 1800 ಹೆಕ್ಟೇರ್ ಹಾಗೂ ನೀರಾವರಿಯನ್ನು ನಂಬಿ 17 ಸಾವಿರ ಹೇಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯನ್ನು  ಮಾಡಿದ್ದಾರೆ. ಒಂದು ಕಡೆ ಮೆಳೆ ಕೈ ಕೊಟ್ಟರೆ. ಇನ್ನೊಂದು ಕಡೆಯಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಾ ಇದೆ. ಇದು ರೈತರನ್ನು ಚಿಂತೇಗೀಡು ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ