ದೇಶದಲ್ಲಿ ಪ್ರಾಮಾಣಿಕ ಇದ್ರೆ ಅದು ಸಿದ್ದರಾಮಯ್ಯ ಮಾತ್ರ: ಬೈರತಿ ಸುರೇಶ್‌

Sampriya

ಶನಿವಾರ, 12 ಜುಲೈ 2025 (18:01 IST)
Photo Credit X
ಬೆಂಗಳೂರು: ಸಿದ್ದರಾಮಯ್ಯ ಮೇಲಿನ ಹೊಟ್ಟೆ ಉರಿಯಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಯಾವುದೇ ಆರೋಪಗಳು ಸಿಎಂ ಅವರ ಹತ್ತಿರವೂ ಸುಳಿಯುವುದಿಲ್ಲ ಎಂದು ಸಿಎಂ ಪರ ಸಚಿವ ಬೈರತಿ ಸುರೇಶ್ ಬ್ಯಾಟಿಂಗ್ ಮಾಡಿದ್ದಾರೆ.

ಅಹಲ್ಯ ಬಾಯಿ ಹೋಳ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಾಮಾಣಿಕ ಸಿಎಂ ಯಾರಾದ್ರು ಇದ್ದರೆ ಅವರು ಸಿದ್ದರಾಮಯ್ಯ. ಸಿಎಂ ಮೇಲೆ ಏನೇನೋ ಆರೋಪ ಮಾಡಿ ಗಾಳಿಯಲ್ಲಿ ಗುಂಡು ಹೊಡೆಯೋ ಕೆಲಸ ಬೇರೆ ರಾಜಕಾರಣಿಗಳು ಮಾಡ್ತಾರೆ. ಆದರೆ ಈ ಆರೋಪಗಳು ಸಿದ್ದರಾಮಯ್ಯ ಅವರ ಹತ್ತಿರವೂ ಬರುವುದಿಲ್ಲ. ಸಿಎಂ ಮೇಲಿನ ಹೊಟ್ಟೆ ಉರಿಗೆ ಆರೋಪ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ. 

16 ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ದೇವರಾಜ್ ಅರಸ್ ದಾಖಲೆ ಮುರಿದು ಸಿಎಂ ಆಗಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ಸಿಎಂ ಮೇಲಿರಲಿ. ನಿಮ್ಮ ಆಶೀರ್ವಾದ ಇರೋವರೆಗೂ ಸಿದ್ದರಾಮಯ್ಯ ಅವರಿಗೆ ಯಾರು ಏನು ಮಾಡೋಕೆ ಆಗೊಲ್ಲ. ನಾನು ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿ ಆಗಿರೋದು ನನ್ನ ಪುಣ್ಯ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ