ಆಪರೇಷನ್ ಕಮಲದ ಆಡಿಯೋ ನಿಜ ಎಂದ ಬಿ.ಎಸ್. ಯಡಿಯೂರಪ್ಪ

ಭಾನುವಾರ, 10 ಫೆಬ್ರವರಿ 2019 (14:03 IST)
ಹುಬ್ಬಳ್ಳಿ : ಆಪರೇಷನ್ ಕಮಲದ  ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಪುತ್ರ ಶಂಕರಗೌಡ ನನ್ನ ಬಳಿ ಬಂದಿದ್ದು ನಿಜ, ನಾನು ಅವರ ಜೊತೆ ಮಾತನಾಡಿದ್ದು ನಿಜ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ‘ಶಾಸಕರ ಮಗ ಶಂಕರಗೌಡನನ್ನು ಕುಮಾರಸ್ವಾಮಿಯವರೇ ರಾತ್ರಿ 12.30ಕ್ಕೆ ಗೆಸ್ಟ್ ಹೌಸ್ ಬಳಿಗೆ ಕಳುಹಿಸಿಕೊಟ್ಟಿದ್ದಾರೆ.  ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.


ಅಲ್ಲದೆ ‘ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಅತ್ಯಂತ ಪ್ರಾಮಾಣಿಕ ಮತ್ತು ಸರಳ ವ್ಯಕ್ತಿ, ಅವರಿಗೆ 50 ಕೋಟಿ ರೂ.ಕೊಟ್ಟಿದ್ದಾರೆ ಎನ್ನುವುದು ಖಂಡಿಸುತ್ತೇನೆ. ಇದು ನಿಜವಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾಳೆ ವಿಧಾನಸಭೆಯಲ್ಲಿ  ಸಿಎಂ ಬಂಡವಾಳ ಬಿಚ್ಚಿಡ್ತೀನಿ’ ಎಂದು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ