ಆಪರೇಷನ್ ಕಮಲ ಆಡಿಯೋ ಎಸ್ಐಟಿ ತನಿಖೆ ಶೀಘ್ರ

ಭಾನುವಾರ, 24 ಫೆಬ್ರವರಿ 2019 (15:36 IST)
ಅಪರೇಷನ್ ಕಮಲ ಆಡಿಯೋ ಪ್ರಕರಣವನ್ನು ಎಸ್ಐ ಟಿ ತನಿಖೆಗೆ ನೀಡಲು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಡಿಸಿಎಂ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಆಪರೇಷನ್ ಆಡಿಯೋ ಪ್ರಕರಣ ಬಗ್ಗೆ ಶೀಘ್ರದಲ್ಲಿ ಎಸ್ಐಟಿ ನೇಮಕವಾಗಲಿದೆ. ಇದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿ ಎಸ್ಐಟಿ ತನಿಖೆಗೆ ಹಿಂದೇಟಾಕುತ್ತಿಲ್ಲ, ಶೀಘ್ರದಲ್ಲಿಯೇ ಎಸ್ಐಟಿ ತನಿಖೆ ನೇಮಕ ಮಾಡಲಾಗುವುದು ಎಂದರು.
ಇನ್ನು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ತಯಾರಿ ನಡೆಯುತ್ತಿದೆ. ರಾಜ್ಯದಲ್ಲಿ ಸರ್ಕಾರವಿರುವುದರಿಂದ ಒಟ್ಟಾಗಿ ಹೋಗಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.

ಸೀಟು ಹಂಚಿಕೆಗಳ ಬಗ್ಗೆ ಈಗಾಗಲೇ ಜೆಡಿಎಸ್ ವರಿಷ್ಟ ದೇವೇಗೌಡ ಅವರ ಬಳಿ ಮಾತನಾಡಲಾಗಿದೆ. ಮುಖಂಡರ, ಶಾಸಕರ ಹಾಗೂ ಚುನಾಯಿತ ಸಮಿತಿಯ ಸಭೆ ನಡೆದಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ