ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಮಲ ಸುದ್ದಿಯಾಗಿದ್ದರೆ ಇತ್ತ ಬಿಸಿಲೂರಿನಲ್ಲಿ ಆಪರೇಷನ್ ಹಸ್ತ ನಡೆಯುತ್ತಿರುವ ವದಂತಿಗಳು ಹರಿದಾಡಲಾರಂಭಿಸಿವೆ.
ರಾಜ್ಯದಲ್ಲಿ ಕೈ-ತೆನೆ ದೋಸ್ತಿ ಇದ್ದು, ಮೈತ್ರಿ ಸರಕಾರ ನಡೆಯುತ್ತಿದೆ. ಆದರೆ ಕಲಬುರಗಿಯಲ್ಲಿ ಕೈ-ತೆನೆ ಕುಸ್ತಿ ಆಂತರಿಕವಾಗಿ ಶುರುವಾದಂತಿದೆ.
ಕಲಬುರಗಿಯಲ್ಲಿ 'ಆಪರೇಶನ್ ಹಸ್ತ' ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ ಕಾಂಗ್ರೆಸ್ ಮುಖಂಡರು ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ದೋಸ್ತಿ ಪಕ್ಷ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರನ್ನ ಸೆಳೆಯಲು ಮುಂದಾಗಿದ್ದ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ ಎನ್ನಲಾಗುತ್ತಿದೆ.
ಕೈ ಪಾಳೆಯದ ತಂತ್ರಕ್ಕೆ ಕೆಂಡಮಂಡಲವಾದ ಕಲಬುರಗಿ ಉತ್ತರ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು, ಸ್ಥಳೀಯವಾಗಿ ನಿಮ್ಮ ಪಕ್ಷ ಸೇರಿದ್ರೆ ಮುಂದೆ ನಮ್ಮ ಗತಿ ಏನು? ಅಂತಾ ಪ್ರಶ್ನಿಸಿದ್ದಾರೆ.
ಆಪರೇಶನ್ ಹಸ್ತ ಮುಂದುವರಿಸಿದ್ರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಅಂತ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆಗೆ ಎಚ್ಚರಿಕೆ ಸಂದೇಶವನ್ನು ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ನೀಡಿದ್ದಾರೆ.