ಕನ್ನಡ ಶಾಲೆ ಕಟ್ಟಡಕ್ಕೆ ಮರಾಠಿ ಭಾಷಿಕರ ವಿರೋಧ!

ಗುರುವಾರ, 31 ಜನವರಿ 2019 (18:29 IST)
ಕನ್ನಡ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಅಗೆಯಲಾಗಿದ್ದ ಎರಡು ಕೊಠಡಿಗಳ ಅಡಿಪಾಯವನ್ನು ರಾತ್ರೋರಾತ್ರಿ ಮುಚ್ಚಿಸಿರುವ ಘಟನೆ ನಡೆದಿದೆ.    

ಮರಾಠಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ರಾತ್ರೋರಾತ್ರಿ ಅಡಿಪಾಯ ಮುಚ್ಚಿಸಿದ್ದಾರೆ. ಮಹಾರಾಷ್ಟ್ರ - ಕರ್ನಾಟಕ ಗಡಿಯ ಮಾನಕಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಡಿ ಗ್ರಾಮ ಮಾನಕಾಪುರದಲ್ಲಿ ಕನ್ನಡ ಶಾಲೆ‌ ವಿದ್ಯಾರ್ಥಿಗಳ ಅನುಕೂಲಕ್ಕೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಎರಡು ಕೊಠಡಿ ಮಂಜೂರು ಮಾಡಿಸಿದ್ದರು.  ಕಟ್ಟಡ ನಿರ್ಮಾಣಕ್ಕೆ ಎಸ್.ಡಿ.ಎಂ.ಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಒಂದೇ ಆವರಣದಲ್ಲಿರುವ ಕನ್ನಡ ಹಾಗೂ ಮರಾಠಿ ಶಾಲೆ ಬೇಡ. ಮಾರಾಠಿ ಶಾಲೆ ಆವರಣದಲ್ಲಿ ಕನ್ನಡ ಶಾಲೆ ಬೇಡ ಎಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಎಸ್. ಡಿ.ಎಂ.ಸಿ ಸದಸ್ಯರ ನಡೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್. ಡಿ.ಎಂ.ಸಿ ಸದಸ್ಯರ ನಡೆ ಖಂಡಿಸಿ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಮಾನಕಾಪುರ ಗ್ರಾಮ ಪಂಚಾಯತಿ ಎದುರು ವಿಧ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ. ಈ ಹಿಂದೆ ಕನ್ನಡ ಶಾಲೆಗೆ ಸೇರಿಸದಂತೆ ಮರಾಠಿ ಶಿಕ್ಷಕರಿಂದ ಪಾಲಕರಿಗೆ ಒತ್ತಾಯ ಮಾಡಲಾಗಿತ್ತು. ಈ ಒತ್ತಾಯದ ನಡುವೆಯೂ ಕನ್ನಡ ಶಾಲೆಗೆ ಮಕ್ಕಳನ್ನು ಪಾಲಕರು ಸೇರಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ