ತ್ರಿಭಾಷಾ ನೀತಿಗೆ ಕುಂ.ವೀ ವಿರೋಧ

ಮಂಗಳವಾರ, 4 ಜೂನ್ 2019 (18:43 IST)
ನಮ್ಮ ಜೀವನ ಕನ್ನಡ ಭಾಷೆ ಮೇಲೆ ಅವಲಂಬಿಸಿದೆ.  ಹಾಗಾಗಿ ಕನ್ನಡ ರಕ್ಷಿಸಿ ಹಿಂದಿ ವಿರೋಧಿಸಿ. ಹೀಗಂತ ಹಿರಿಯ ಸಾಹಿತಿ ಕುಂ.ವೀ ಕರೆ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಹೇಳಿಕೆ ನೀಡಿದ್ದು, ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದಿ ಯಾವುದೇ ಕಾರಣಕ್ಕೂ ನಮ್ಮ ಗಡಿ ದಾಟದಂತೆ ನೋಡಿಕೊಳ್ಳಬೇಕು. ನಮ್ಮ ಕೆಂಪು-ಬಿಳಿ ರಕ್ತ ಕಣಗಳನ್ನ ಇನ್ನೊಂದು ಭಾಷೆ ಆಕ್ರಮಿಸದಂತೆ ನೋಡಿಕೊಳ್ಳಬೇಕು. ಹಿಂದಿ ಸಾಹಿತ್ಯವನ್ನ ನಾವು ಓದಿದ್ದೇವೆ.

ಕನ್ನಡ ನಾಶವಾದರೆ ನಮ್ಮ ಜೀವನ ನಾಶವಾಗುತ್ತದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕೆಲ ದಿನಗಳಾಗಿದೆ. ಆಗಲೇ ಒಂದು ಭಾಷೆಯ ಮೇಲೆ ಹಲ್ಲೆ ನಡಿಯುತ್ತಿದೆ. ನಾವು ಬಿಜೆಪಿ ವಿರೋಧಿಯಲ್ಲ. ಏಕ ಭಾಷೆ, ಏಕ ನೀತಿಯ ವಿರೋಧಿ ಎಂದರು.

ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು. ಪೇಜಾವರ ಶ್ರೀಗಳು ಸಂವಿದಾನದ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನ ವಿರೋಧಿಸಿದವರು ಸಂಸದರಾಗಿದ್ದಾರೆ. ದೇಶದಲ್ಲಿ ಸರ್ವಾಧಿಕಾರಿ ಶಕ್ತಿಗಳು ಪ್ರವೇಶ ಮಾಡುತ್ತಿವೆ ಎಂದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ