ಜನಸಂಖ್ಯೆ ಅನುಗುಣವಾಗಿ ಹಣ ತೆಗೆದು ಇಟ್ಟಿದ್ದು ನಮ್ಮ ಸರ್ಕಾರ-ಸಿಎಂ

ಶನಿವಾರ, 28 ಅಕ್ಟೋಬರ್ 2023 (16:00 IST)
ಎಲ್ಲರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಸರ್ಕಾರ 2023 ನೇ ಸಾಲಿನಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಣೆ ಮಾಡಿದೆ.ಈ ವರ್ಷದ ಜಯಂತಿ ಯಲ್ಲಿ ವಿವಿಧ ಕ್ಷೆತ್ರದಲ್ಲಿ ಸಾಧನೆ ಮಾಡಿದವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಧಾನ ಮಾಡಿದ್ದೇವೆ.ಅವರೆಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ.ಇತರರಿಗೆ ಸ್ಫೂರ್ತಿಯಾಗಲಿ ಎಲ್ಲರೂ ಅವರಂತೆ ಸಾಧನೆ ಮಾಡಲಿ.ಜೀವನದ ದಾರಿ ಅವರ ಸಾಧನೆ ಎಲ್ಲರಿಗೂ ದಾರಿದೀಪವಾಗಲಿ.ಎಲ್ಲಾ ಪ್ರಶಸ್ತಿ ಪುರಸ್ಕೃತಕ್ಕೆ ಅಭಿನಂದನೆಗಳನ್ನ ಸಿಎಂ ಸಲ್ಲಿಸಿದ್ರು.
 
ಸುಮಾರು 20 ವರ್ಷಗಳಿಂದ ಬೇಡಿಕೆ ಇತ್ತು.ಸರ್ಕಾರ ತೀರ್ಮಾನ ಮಾಡಿ ಇಲ್ಲಿವರೆಗೂ ಪ್ರತ್ಯೇಕ ಸಚಿವಾಲಯ ಇರಲಿಲ್ಲ.ಈಗ  ವಿಧಾನಸೌಧದಲ್ಲಿ ಪರಿಶಿಷ್ಟ ವರ್ಗಗಳಿಗೆ ಪ್ರತ್ಯೇಕ ಸಚಿವಲಾಯ ಮಾಡಿ ಘೋಷಣೆ ಮಾಡಿದ್ದೇವೆ.ಇದರಿಂದ ಆ ಜನರ ಅಭಿವೃದ್ಧಿ ಇನ್ನು ಹೆಚ್ಚಿನ ರೀತಿಯಲ್ಲಿ ಆಗುತ್ತೆ.ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಎಸ್ ಈ ಪಿ ಟಿ ಎಸ್ ಪಿಪರಿಶಿಷ್ಟ ಜಾತಿ ಮತ್ತು ವರ್ಗ ಗಳಿಗೆ ಕಲ್ಯಾಣಕ್ಕಾಗಿ ಹಣ ಖರ್ಚು ಮಾಡಿದ್ದುನಮ್ಮ ಸರ್ಕಾರ.ಹಿಂದೆ  ಆರು ಸಾವಿರ ಏಳು ಸಾವಿರ ಇತ್ತು.ಕುಮಾರಸ್ವಾಮಿ, ಬೊಮ್ಮಾಯಿ ಯಡಿಯೂರಪ್ಪ ಕಾಲದಲ್ಲಿ ಈ ಹಣ ಹೆಚ್ಚಾಗಲಿಲ್ಲ.ಪರಿಶಿಷ್ಟ ವರ್ಗದವರದು 7% ಇದೆ.2011 ರ ಪ್ರಕಾರ 24.1% ಇದಾರೆ.
 
ಈ ಜನಸಂಖ್ಯೆ ಅನುಗುಣವಾಗಿ ಹಣ ತೆಗೆದು ಇಟ್ಟಿದ್ದು ನಮ್ಮ ಸರ್ಕಾರ.ಯಾವುದೇ ಸರ್ಕಾರ ಬಂದರೂ ಕಾನೂನು ಬದಲಾವಣೆಕೆ ಸಾಧ್ಯವಿಲ್ಲ.88 ಸಾವಿರ ಕೋಟಿ ನಾವು ಈ ವರ್ಗಕ್ಕೆ ಖರ್ಚು ಮಾಡಿದ್ದೇವೆ.ಸಂವಿಧಾನ ಪ್ರಕಾರ ನಾವು ಅಭಿವೃದ್ಧಿ ಹಣದಲ್ಲಿ ಖರ್ಚು ಮಾಡಬೇಕು.ಇದನ್ನ ಹಿಂದಿನ ಸರ್ಕಾರ ಮಾಡಿಲ್ಲ ನಾವು ಮಾಡಿದ್ದೀವಿ.ಇಡೀ ರಾಜ್ಯ ಸಂಭ್ರಮದಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡ್ತಾ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ