ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್

ಮಂಗಳವಾರ, 14 ನವೆಂಬರ್ 2023 (20:00 IST)
ಕ್ಯೂಆರ್ ಕೋಡ್ ಮೂಲಕ ಹೆಚ್ಚಿನ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ.ಪ್ರಯಾಣಿಕರಿಂದ ಬೇಡಿಕೆ ಬಂದ ಹಿನ್ನೆಲೆ ನ. 16ರಿಂದ ಏಕಕಾಲಕ್ಕೆ 6 ಕ್ಯೂಆರ್ ಕೋಡ್ ಟಿಕೇಟ್ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ.ನಮ್ಮ ಮೆಟ್ರೋ ಆ್ಯಪ್, ವಾಟ್ಸಾಪ್, ಪೇಟಿಎಂ, ಯಾತ್ರಾ ಆ್ಯಪ್ ಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಪ್ರಸ್ತುತ ಒಂದು ಟಿಕೆಟ್ ಖರೀದಿಗೆ ಮಾತ್ರ ಅವಕಾಶ ಇತ್ತು.

ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಈ ಅಪ್ಡೇಟ್ ಮಾಡಲಾಗಿದೆ.ಪ್ರಯಾಣಿಕರು ಪ್ರವೇಶ ಮತ್ತು ನಿರ್ಗಮನದ ಸಂದರ್ಭದಲ್ಲಿ ಎಫ್.ಸಿ. ಗೇಟ್ ಬಳಿ ಆರು ಜನ ಪ್ರಯಾಣಿಕರಿಗೆ ಒಂದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದು.ಇದರಿಂದಾಗಿ ಟಿಕೆಟ್ ಕೌಂಟರ್ ನಲ್ಲಿ ಸರತಿ ಸಾಲು ನಿಯಂತ್ರಿಸಲು ತಪ್ಪುತ್ತದೆ.ಇನ್ನೂ ಕ್ಯೂಆರ್ ಕೋಡ್ ಟಿಕೆಟ್ ಮೇಲೆ ಶೇ. 5 ರಷ್ಟು ರಿಯಾಯಿತಿ  BMRCL ನೀಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ