5ಜಿ ನೆಟ್ ವರ್ಕ್ ಪರೀಕ್ಷಿಸಿ ಯಶಸ್ವಿಯಾದ ನಮ್ಮ ಮೆಟ್ರೋ

ಶನಿವಾರ, 23 ಜುಲೈ 2022 (18:22 IST)
ಟ್ರಾಯ್ ಪ್ರಾಯೋಗಿಕ ಯೋಜನೆಯಡಿಯಲ್ಲಿ  5 ಜಿ ನೆಟ್ವರ್ಕ್ನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ  ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ ಪಾತ್ರವಾಗಿದೆ. 200 ಮೀಟರ್ ವ್ಯಾಪ್ತಿಗೆ 5G ನೆಟ್ವರ್ಕ್ ಸಿಗುತ್ತಿದ್ದು ಎಂಜಿ ರಸ್ತೆ ಮೆಟ್ರೋ ಸ್ಟೇಷನ್ನಲ್ಲಿ ರಿಲಯನ್ಸ್ ಜಿಯೊ ಇದನ್ನು ಸ್ಥಾಪಿಸಿದೆ. ಪರೀಕ್ಷೆ ವೇಳೆ 1.45 Gbps ಡೌನ್ ಲೋಡ್ ಮತ್ತು 65 Mbps ಅಪ್ ಲೋಡ್ ಸ್ಪೀಡ್ ಇದ್ದು, ಇದು 4Gಗಿಂತ 50 ಪಟ್ಟು ವೇಗವನ್ನು ಹೊಂದಿದೆ ಎಂದು ನಮ್ಮ ಮೆಟ್ರೋ ಟ್ವೀಟ್ ಮಾಡಿದೆ. ಬೆಂಗಳೂರಿನಲ್ಲಿ ಜಿಯೊ 5G ನನೆಟ್ವರ್ಕ್ ವೇಗ 4ಜಿಗಿಂತ 10 ಪಟ್ಟು ಹೆಚ್ಚಿದ್ದು, ಅಪ್ಲೋಡ್ ವೇಗ ಅಷ್ಟೊಂದು ಇಲ್ಲ ಎಂದೇ ಹೇಳಲಾಗುತ್ತಿದೆ. ಅದೇ ವೇಳೆ ಈಗಿರುವ 4 ಜಿ ನೆಟ್ವರ್ಕ್ ಹೆಚ್ಚು ವೇಗ ಹೊಂದಿದೆ. 5 ಜಿ ನೆಟ್ವರ್ಕ್ ಗಾಗಿ ಹಲವಾರು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಅಪ್ಲೋಡ್ ವೇಗ ಕೂಡಾ ಡೌನ್ಲೋಡ್ ವೇಗದಷ್ಟೇ ಇರಬೇಕು ಎಂದು ಜನರು ಬಯಸುತ್ತಾರೆ.  ಸದ್ಯಕ್ಕೆ ಜಿಯೋ ಮತ್ತು ಟ್ರಾಯ್ 5 ಜಿ ನೆಟ್ವರ್ಕ್ ಸಾಧ್ಯತೆಯ ಪರೀಕ್ಷೆಗಳನ್ನು ಮಾಡುತ್ತಿದೆ. 5 ಜಿ ಸ್ಪೆಕ್ಟ್ರಂ ಹರಾಜಿನ ನಂತರ ಜಿಯೊ 5ಜಿ ನೆಟ್ವರ್ಕ್ ಆರಂಭಿಸುವ ನಿರೀಕ್ಷೆ ಇದೆ. ಅಂದಹಾಗೆ 5 ಜಿ 4ಜಿಗಿಂತ ಕನಿಷ್ಟ ಶೇ 10ರಷ್ಟು ದುಬಾರಿ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ