ಕ್ಲಿಕ್ಕಿಂಗ್ ಪೆನ್‌ಗಳನ್ನು ಪರೀಕ್ಷಾ ಹಾಲ್‌ಗೆ ತರುವ ಹಾಗಿಲ್ಲ
ಜನವರಿಯ ಆರಂಭ ಎಂದರೆ ಶಾಲೆಗಳಲ್ಲಿ ಪರೀಕ್ಷೆಗಳದ್ದೇ ಕಲರವ. ಶಿಕ್ಷಕರು ಪಾಠ ಪ್ರವಚನಗಳನ್ನು ಮುಗಿಸುವ ತರಾತುರಿಯಲ್ಲಿದ್ದರೆ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳಿಗೆ ಸಿದ್ಧರಾಗುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಆದರೆ ಬೆಂಗಳೂರು ನಗರದಲ್ಲಿರುವ ಕೆಲವೊಂದು ಶಾಲೆಗಳು ಪೆನ್‌ಗಳಿಗಾಗಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಕ್ಲಿಕ್ಕಿಂಗ್ ಪೆನ್‌ಗಳನ್ನು ಪರೀಕ್ಷಾ ಹಾಲ್‌ಗೆ ತರುವಂತಿಲ್ಲ ಎಂದು ತಿಳಿಸಿದೆ. ಪರೀಕ್ಷಾ ಕೊಠಡಿಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನವಿರಬೇಕು ಎಂಬ ನಿಟ್ಟಿನಲ್ಲಿ ಹೆಚ್ಚಿನ ಶಾಲೆಗಳು ಶಬ್ಧವನ್ನುಂಟು ಮಾಡುವ ಕ್ಲಿಕ್ಕಿಂಗ್ ಪೆನ್‌ಗಳನ್ನು ನಿರ್ಬಂಧಿಸಿವೆ. ಇದರಿಂದ ಪೋಷಕರೂ ಕೂಡ ಈ ನಿರ್ಧಾರಕ್ಕೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.