150 ಸೀಟ್ ಗೆಲ್ಲೋದು ನಮ್ಮ ಟಾಸ್ಕ್
ಜನಾರ್ದನ ರೆಡ್ಡಿ ಹೊಸ ಸ್ಥಾಪನೆ ವಿಚಾರ ನಮಗೆ ಟಾಸ್ಕ್ ಏನಿಲ್ಲ. ನಮ್ಮದೂ ರಾಷ್ಟ್ರೀಯ ಪಕ್ಷ. ಬಿಜೆಪಿ 2023ರಲ್ಲಿ 150 ಸ್ಥಾನ ಗೆಲ್ಲುವುದು ನಮ್ಮ ಟಾಸ್ಕ್ ಎಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ನಮ್ಮ ಉದ್ದೇಶ ಕಾಂಗ್ರೆಸ್ ಮುಕ್ತ ರಾಜ್ಯ ಆಗಬೇಕು. ಸ್ನೇಹ ಮತ್ತು ರಾಜಕಾರಣ ಒಂದೇ ತಟ್ಟೆಯಲ್ಲಿ ತೂಗಲು ಹೋಗಬೇಡಿ. ನಮ್ಮ ಪಕ್ಷ ಏನೇ ಕೆಲಸ ಹೇಳಿದ್ರು ಮಾಡುವೆ ಎನ್ನುವ ಮೂಲಕ ಪರೋಕ್ಷವಾಗಿ ಆಪ್ತಮಿತ್ರ ಜನಾರ್ದನ ರೆಡ್ಡಿ ವಿರುದ್ದ ಪ್ರಚಾರಕ್ಕೂ ನಾನು ಸಿದ್ಧ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು