ಗುತ್ತಿಗೆದಾರ ಪದ್ಮಣ್ಣ ಏಗಣ್ಣವರ್ ಪ್ರಕರಣ ಬೇಧಿಸಿದ ಪೊಲೀಸರು

ಮಂಗಳವಾರ, 24 ಮೇ 2016 (21:03 IST)
ಹುಬ್ಬಳ್ಳಿಯ ನೂಲ್ವಿ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಪದ್ಮಣ್ಣ ಏಗಣ್ಣವರ್ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪದ್ಮಣ್ಣ ಏಗಣ್ಣವರ ಮೊಬೈಲ್ ಕಾಲ್‌ ಲಿಸ್ಟ್ ಮಾಹಿತಿ ಜಾಡು ಹಿಡಿದ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಜಲ ಮಂಡಳಿ ಇಲಾಖೆಯಲ್ಲಿ ಜೆ.ಇ ಆಗಿ ಕೆಲಸ ನಿರ್ವಹಿಸುತ್ತಿರುವ ಅಂಜಲಿ ಹಾಗೂ ಆಕೆಯ ಸಹೋದರರಾದ ರೋಹಿತ್ ಮತ್ತು ಶಂಭುಲಿಂಗರನ್ನು ಬಂಧಿಸಿದ್ದಾರೆ.
 
ಕೊಲೆಯಾಗಿರುವ 38 ವರ್ಷದ ಪದ್ಮಣ್ಣನಿಗೆ ಮದುವೆಯಾಗಿ ಎರಡು ಮಕ್ಕಳಿದ್ದವು. ಆದರು ಸಹ ಅಂಜಲಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ರೋಚ್ಚಿಗೆದ್ದ ಅಂಜಲಿ ತನ್ನ ಸಹೋದರರೊಂದಿಗೆ ಸೇರಿ ಮೇ 11 ರಂದು ಧಾರವಾಡ ಜಿಲ್ಲೆಯ ನೂಲ್ವಿ ಕ್ರಾಸ್ ಬಳಿ ಇತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
 
ಪದ್ಮಣ್ಣ ಏಗಣ್ಣವರ ಕೊಲೆಗೆ ಸಂಬಂದಿಸಿದಂತೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ