ಪಾಗಲ್ ಪ್ರೇಮಿ ಚೂರಿ ಇರಿತ ಪ್ರಕರಣ; ಆಸ್ಪತ್ರೆಗೆ ಭೇಟಿ ನೀಡಿದ ಸಚಿವ

ಭಾನುವಾರ, 30 ಜೂನ್ 2019 (17:47 IST)
ಪಾಗಲ್ ಪ್ರೇಮಿಯಿಂದ ಪ್ರೇಯಸಿಯ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ದಾಖಲಾಗಿರುವ ಆಸ್ಪತ್ರೆಗೆ ಸಚಿವ ಭೇಟಿ ನೀಡಿದ್ದಾರೆ.

ಮಂಗಳೂರಿನಲ್ಲಿ ಪಾಗಲ್ ಪ್ರೇಮಿಯಿಂದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ‌ಭೇಟಿ ನೀಡಿದ್ದಾರೆ ಸಚಿವ ಯು.ಟಿ.ಖಾದರ್. ಸದ್ಯ ದೀಕ್ಷಾ ಶೇ.90ರಷ್ಟು ಪರವಾಗಿಲ್ಲ, ಇನ್ನೂ 48 ಗಂಟೆ ನಿಗಾದಲ್ಲಿ ಇಡಲಾಗಿದೆ. ಈ ಆಸ್ಪತ್ರೆಯ ವೈದ್ಯರು ದೀಕ್ಷಾಗೆ ಪುನರ್ಜನ್ಮ ನೀಡಿದ್ದಾರೆ. ಸದ್ಯ ಆಕೆ ನಮಗೆ ಎಲ್ಲವಕ್ಕೂ ಸ್ಪಂದನೆ ನೀಡುತ್ತಿದ್ದಾಳೆ. ಈ ಘಟನೆ ಅತ್ಯಂತ ದುರಾದೃಷ್ಟ ಮತ್ತು ನೋವಿನ ವಿಚಾರ ಅಂತ ಹೇಳಿದ್ರು.

ಚಿಕಿತ್ಸೆಗೆ ಸಂಬಂಧಿಸಿ ಎಲ್ಲಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಪ್ರಕರಣ ಸಂಬಂಧ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ಆರೋಪಿ ಸಿಕ್ಕರೂ ಘಟನೆ ಯಾಕಾಯ್ತು ಅನ್ನೋ ಬಗ್ಗೆ ಇಲಾಖೆ ಆತ್ಮಾವಲೋಕನ ಮಾಡಲಿ.
ಅಮಲು ಪದಾರ್ಥಕ್ಕೆ ಒಳಪಟ್ಟು ಆರೋಪಿ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ವೈದ್ಯರು ಕೂಡ ಮಾಹಿತಿ ನೀಡಿದ್ದಾರೆ ಎಂದರು.

ಇದಕ್ಕೆ ಸಂಬಂಧಿಸಿ ಡಿಸಿ, ಕಮಿಷನರ್ ಮತ್ತು ವೈದ್ಯರ ಸಭೆ ನಡೆಸುತ್ತೇನೆ. ಅಮಲು ಪದಾರ್ಥ ಬಳಕೆ ಹೆಚ್ಚಳ ಸಂಬಂಧಿಸಿ ಕ್ರಮದ ಬಗ್ಗೆ ಚರ್ಚಿಸಲಾಗುವುದು. ಆವತ್ತು ಘಟನೆ ನಡೆದಾಗ ಎಲ್ಲರೂ ವಿಡಿಯೋ ಮಾಡಿದ್ದಾರೆ. ಮೊಬೈಲ್ ಎಸೆದಿದ್ದರೂ ಅವನಿಗೆ ಭಯ ಆಗುತ್ತಿತ್ತು. ವಿಡಿಯೋ ಮಾಡೋ ಬದಲು ಧೈರ್ಯ ‌ಮತ್ತು ಮಾನವೀಯತೆ ಯಾಕೆ ಬರಲಿಲ್ಲ? ನಾನು ಆರೋಗ್ಯ ಸಚಿವನಾಗಿದ್ದಾಗ ಇದಕ್ಕೆ ಕಾಯ್ದೆಯನ್ನೇ ತಂದಿದ್ದೆ. ಈ ಸಂದರ್ಭ ಬದುಕಿಸಲು ಯತ್ನಿಸಿದ್ರೆ ಪ್ರಶಸ್ತಿ ಕೊಡುವ ಕಾಯ್ದೆ ತಂದಿದ್ದೇನೆ ಎಂದು ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ