ಸಚಿವರ ವಿರುದ್ಧ ಕಮೀಷನ್ ಪಡೆದ ಆರೋಪ ಮಾಡಿದ ಕಾಂಗ್ರೆಸ್ ಶಾಸಕನಿಗೆ ನೋಟಿಸ್
ಜಲಾಶಯದ ಕಾಮಗಾರಿಯೊಂದರಲ್ಲಿ ರಾಜ್ಯದ ಸಚಿವರು ಕಮೀಷನ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದ ಕೈ ಪಡೆಯ ಶಾಸಕನಿಗೆ ಕೆಪಿಸಿಸಿ ಖಡಕ್ ನೋಟಿಸ್ ಜಾರಿ ಮಾಡಿದೆ.
ಕೆಪಿಸಿಸಿಯಿಂದ ಶಾಸಕ ಭೀಮಾನಾಯ್ಕಗೆ ನೊಟೀಸ್ ಜಾರಿಗೊಳಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಿಂದ ನೊಟೀಸ್ ನೀಡಲಾಗಿದೆ.
ನಾಲಾ ಕಾಮಗಾರಿಯಲ್ಲಿ ಕಮೀಷನ್ ಹೊಡೆದ ಆರೋಪ ಕೇಳಿಬಂದಿತ್ತು. ಮಾಲವಿ ಜಲಾಶಯದ ಕಾಮಗಾರಿಯಲ್ಲಿ ಕಮೀಷನ್ ಪಡೆದಿದ್ದಾರೆ ಎಂದು ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ ವಿರುದ್ಧ ಆರೋಪ ಮಾಡಲಾಗಿತ್ತು.
ಪರಮೇಶ್ವರ್ ಕಮೀಷನ್ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು ಶಾಸಕ ಭೀಮಾನಾಯ್ಕ್. ಹೀಗಾಗಿ ನೊಟೀಸ್ ಜಾರಿ ಮಾಡಿದೆ ಕೆಪಿಸಿಸಿ.