ಪ್ರೀತಿಸಿದ ಹುಡುಗಿಗೆ ಚಾಕು ಇರಿದ ಪಾಗಲ್ ಪ್ರೇಮಿ

ಶುಕ್ರವಾರ, 13 ಸೆಪ್ಟಂಬರ್ 2019 (14:30 IST)
ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಗೆ ಚಾಕು ಇರಿದಿದ್ದಾನೆ.

ಮೂರ್ನಾಲ್ಕು ವರ್ಷಗಳಿಂದ ಅವರಿಬ್ಬರೂ ಪ್ರೀತಿಸುತ್ತಿದ್ದರು. ಆದರೆ ಐದಾರು ತಿಂಗಳ ಹಿಂದೆ ಇವರ ಪ್ರೀತಿಯಲ್ಲಿ ಬಿರುಗಾಳಿ ಬೀಸಿದ್ದು, ದೂರ ದೂರವಾಗಿದ್ದಾರೆ.

ಆದರೆ ಪ್ರೀತಿ ಮಾಡಿದ ಹುಡುಗಿ ಮೇಲೆ ದ್ವೇಷ ಸಾಧಿಸಲು ಶುರುಮಾಡಿದ ಹುಡುಗ, ತನ್ನ ಪ್ರೀತಿಯ ಹುಡುಗಿಗೆ ಚಾಕು ಇರಿದು ಪರಾರಿಯಾಗಿದ್ದನು.

ಬೆಂಗಳೂರಿನ ಚೊಕ್ಕಸಂದ್ರದಲ್ಲಿ ಘಟನೆ ನಡೆದಿದ್ದು, ಯುವತಿ ಕಾವ್ಯಾ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆರೋಪಿ ಜನಾರ್ಧನ್ ನನ್ನ ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ