Pahalgam Attack, ದಾಳಿ ವೇಳೆ ಧರ್ಮ ಕೇಳ್ಕೊಂಡು ಕೂರಕ್ಕೆ ಆಗುತ್ತಾ: ಸಚಿವ ಆರ್.ಬಿ. ತಿಮ್ಮಾಪುರ

Sampriya

ಶನಿವಾರ, 26 ಏಪ್ರಿಲ್ 2025 (16:35 IST)
Photo Credit X
ಬಾಗಲಕೋಟೆ: ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡುತ್ತಿರುವ ವೇಳೆ ಧರ್ಮ ಕೇಳುತ್ತಾ ಕೂರ್ಲಿಕ್ಕೆ ಸಾಧ್ಯವಾ,  ಕೇಳಿರಲಿಕ್ಕಿಲ್ಲ ಎಂಬುದು ನನ್ನ ಭಾವನೆ. ಒಂದು ವೇಳೆ ಕೇಳಿದ್ದರೂ ಧರ್ಮದ ಹೆಸರಿನಲ್ಲಿ ಅದನ್ನು ಲಿಂಕ್ ಮಾಡುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಹುಗಾರಿಕೆ ವೈಫಲ್ಯ ಮುಚ್ಚಿಸಲು ಹಿಂದೂ–ಮುಸ್ಲಿಂ ಬಣ್ಣ ಕಟ್ಟುವುದು. ಚುನಾವಣೆ ದೃಷ್ಟಿಯಿಂದ ನೋಡುವುದು ಸರಿಯಲ್ಲ’ ಎಂದರು.

ಕಾರ್ಗಿಲ್‌, ಪುಲ್ವಾಮ, ಪಹಲ್ಗಾಮ್‌ ದಾಳಿ ನೋಡಿದರೆ ಕೇಂದ್ರದ ಬೇಹುಗಾರಿಕೆ ವೈಫಲ್ಯ ಗೊತ್ತಾಗುತ್ತದೆ. ಸತ್ತವರ ಹೆಸರಿನಲ್ಲಿ ಲಾಭ ತೆಗೆದುಕೊಳ್ಳುವುದೇ ಬಿಜೆಪಿಯವರ ಧ್ಯೇಯವಾಗಿದೆ. ದೇಶ ಗಂಡಾಂತರದಲ್ಲಿದ್ದಾಗ್ಯೂ ರಾಜಕೀಯ ಮಾಡುವುದು ಬಿಜೆಪಿ ಎಂದು ಟೀಕೆ ಮಾಡಿದರು.

ಜಾತಿ ಗಣತಿ ಬಗ್ಗೆ ಇರುವ ಗೊಂದಲಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. ಈ ಸಂಬಂಧ ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು. ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿರುವಾಗಲೇ ಅನ್ಯಾಯ ಆಗಿದೆ ಎಂಬಂತೆ ಬಿಜೆಪಿಯವರು ಬಿಂಬಿಸುತ್ತಿರುವುದು ಸರಿಯಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ