Kavya Maran video: ನಿಮ್ಮಜ್ಜಿ.. ಕ್ಯಾಚ್ ಬಿಟ್ರಲ್ಲೋ.. ಕಾವ್ಯಾ ಮಾರನ್ ಎಕ್ಸ್ ಪ್ರೆಷನ್ ಗೇ ಒಂದು ಕ್ಯಾಮರಾ ಇಡಬೇಕು
ನಿನ್ನೆಯ ಪಂದ್ಯವನ್ನು ಹೈದರಾಬಾದ್ ತಂಡ 5 ವಿಕೆಟ್ ಗಳಿಂದ ಗೆದ್ದುಕೊಂಡಿದ್ದು ಈ ಮೂಲಕ ಚೆನ್ನೈ ಪ್ಲೇ ಆಫ್ ಹಂತದಿಂದ ಹೊರಬಿದ್ದಿದೆ. ಆದರೆ ಹೈದರಾಬಾದ್ ಬ್ಯಾಟಿಂಗ್ ವೇಳೆ ಕಮೀಂದು ಮೆಂಡಿಸ್ ಫ್ರೀ ಹಿಟ್ ಸಿಕ್ಕರೂ ಅದನ್ನು ಬಳಸಿಕೊಳ್ಳಲು ವಿಫಲರಾದಾಗ ಕಾವ್ಯಾ ಹತಾಶೆಗೊಳಗಾದರು. ಕೈ ಸನ್ನೆ ಮಾಡಿ ಥೂ ನಿನ್ನ ಎಂಬಂತೆ ನಿರಾಸೆ ಹೊರಹಾಕಿದರು. ಅವರ ಈ ಮುಖಭಾವದ ವಿಡಿಯೋ ವೈರಲ್ ಆಗಿದೆ.
ಇನ್ನೊಮ್ಮೆ ಚೆನ್ನೈ ಬ್ಯಾಟಿಂಗ್ ವೇಳೆ ಹರ್ಷಲ್ ಪಟೇಲ್ ಸುಲಭ ಕ್ಯಾಚ್ ಒಂದನ್ನು ಕೈ ಚೆಲ್ಲಿದಾಗ ಹೆಚ್ಚು ಕಡಿಮೆ ಸೀಟ್ ನಿಂದ ಜಿಗಿದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅವರ ಈ ಎರಡು ಮುಖಭಾವಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.