ಪಾಕಿಸ್ತಾನದ ದಾಳಿಯ ಹಿನ್ನಲೆ; ಕಾರವಾರ ಬಂದರಿನಲ್ಲಿ ಹೈ ಅಲರ್ಟ್

ಗುರುವಾರ, 28 ಫೆಬ್ರವರಿ 2019 (14:02 IST)
ಕಾರವಾರ : ಪಾಕಿಸ್ತಾನದ ದಾಳಿಯ ಹಿನ್ನಲೆಯಲ್ಲಿ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಅರಬ್ಬೀ ಸಮುದ್ರದ ಆಳ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಮರಳಿ ತೀರಕ್ಕೆ ನಿರ್ಗಮಿಸುವಂತೆ ನೌಕಾದಳವು ಸೂಚನೆ ನೀಡಿದೆ.

ಬುಧವಾರ ಮಧ್ಯರಾತ್ರಿಯಿಂದ ನೌಕಾದಳದವರು ಕರಾವಳಿ ತೀರದಿಂದ 12, 18 ನಾಟಿಕನ್ ಮೈಲು ದೂರದ ಗುಜರಾತ್, ಗೋವಾ ಭಾಗದ ಬುಲ್‍ಟ್ರಾಲ್, ಪರ್ಷಿಯನ್ ಬೋಟ್ ಗಳನ್ನು ಮರಳಿ ಬಂದರಿಗೆ  ಕಳುಹಿಸುತ್ತಿದೆ.

 

ಗುಜರಾತ್ ಹಾಗೂ ಗೋವಾ ಭಾಗದಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆಯನ್ನು ಸಹ ನೀಡಿದೆ.  ಈ ಮೂಲಕ ಕರಾವಳಿಯಲ್ಲಿ ನೌಕಾದಳ ಹದ್ದಿನ ಕಣ್ಣಿಟ್ಟಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ